LATEST NEWS
ಸುರತ್ಕಲ್ ಕೃಷ್ಣಾಪುರ 7 ಬ್ಲಾಕ್‌ನಲ್ಲಿ ಒಂದು ಸುಸಜ್ಜಿತ ಸುಂದರ ಪಾರ್ಕ್
ಸುರತ್ಕಲ್ ಕೃಷ್ಣಾಪುರ 7 ಬ್ಲಾಕ್‌ನಲ್ಲಿ ಒಂದು ಸುಸಜ್ಜಿತ ಸುಂದರ ಪಾರ್ಕ್
ಸುರತ್ಕಲ್ ಕೃಷ್ಣಾಪುರ 7 ಬ್ಲಾಕ್‌ನಲ್ಲಿ ಸುಂದರ ಪಾರ್ಕ್ ನಿರ್ಮಾಣವಾಗುತ್ತಿದ್ದು ಇದು ಈಗ ಜನರ ಗಮನ ಸೆಳೆಯುತ್ತಿದೆ. ಸುಮಾರು ಮುಕ್ಕಾಲು ಎಕರೆ ಜಾಗದಲ್ಲಿ ನಿರ್ಮಾಣವಾಗುತ್ತಿರುವ ಈ ಪಾರ್ಕ್ ಈಗಾಗಲೇ ಸಾರ್ವಜನಿಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಕೃಷ್ಣಾಪುರ 7 ಬ್ಲಾಕ್‌ನ ಉರ್ದು ಸರಕಾರಿ ಪ್ರಾಥಮಿಕ ಶಾಲೆಯ ಪಕ್ಕದಲ್ಲೇ ಸುಮಾರು ಮುಕ್ಕಾಲು ಎಕ್ರೆ ಪ್ರದೇಶದಲ್ಲಿರುವ ಈ ಪಾರ್ಕ್ ನಿರ್ಮಾಣಕ್ಕೆ 80 ಲಕ್ಷ ರೂ. ವೆಚ್ಚ ತಗುಲಿದೆ. ವಾಕಿಂಗ್ ಟ್ರ್ಯಾಕ್, ಮಕ್ಕಳ ಆಟದ ಮೈದಾನ, ಉಯ್ನಾಲೆ ಮತ್ತಿತರ ಆಟದ ವಸ್ತುಗಳಿವೆ. ಇನ್ನು ದೊಡ್ಡವರ ದೈಹಿಕ ಕಸರತ್ತಿಗೆ ಸೈಕ್ಲಿಂಗ್ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ. ಹಿರಿಯರಿಗೆ ಕಿರಿಯರಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಇಲ್ಲಿದೆ. ತಂಪಿನ ಅನುಭವಕ್ಕಾಗಿ ವಿವಿಧ ಜಾತಿಯ ಸಸಿಗಳನ್ನು ನೆಡಲಾಗಿದೆ.
ಕುಳಿತುಕೊಳ್ಳಲು ಹಾಕಿದ ಗೋಪುರ ಹಾಗೂ ವೃತ್ತಾಕಾರದ ಫೌಂಟೇನ್ ಗಮನ ಸೆಳೆಯುತ್ತದೆ. ಈ ಹಿಂದೆ ಕೇವಲ ವಾಕಿಂಗ್ ಟ್ರ್ಯಾಕ್ ನಿರ್ಮಿಸಿ ಇಂಟರ್ ಲಾಕ್ ಅಳವಡಿಸಿ ಬಿಡಲಾಗಿತ್ತು. ಇದೀಗ ಸುಸಜ್ಜಿತ ಪಾರ್ಕ್ ನಿರ್ಮಿಸಲಾಗಿದೆ. ಒಳ ಹೋಗುವಲ್ಲಿ ದ್ವಾರ ಹಾಗೂ ಸುತ್ತಲೂ ಭದ್ರತೆಗಾಗಿ ಗೋಡೆ ನಿರ್ಮಿಸಿ ಪಾರ್ಕ್ ಹಾಳಾಗದಂತೆ ಯೋಜನೆ ರೂಪಿಸಲಾಗಿದೆ.
ಅಮೃತ್ ಯೋಜನೆಯಡಿ ಇದಕ್ಕೆ 58 ಲಕ್ಷ ರೂಪಾಯಿ ಬಿಡುಗಡೆಯಾಗಿದ್ದು, ಉಳಿದಂತೆ ಪಾಲಿಕೆಯ ಎಸ್‌ಎಫ್‌ಸಿ ಯೋಜನೆಯಡಿ 24 ಲಕ್ಷ ರೂಪಾಯಿ ಒಳಾಂಗಣ, ಅದರಲ್ಲಿ ಎಲ್‌ಇಡಿ ಲೈಟ್ ವ್ಯವಸ್ಥೆಗಾಗಿ ಎನ್‌ಎಂಪಿಟಿ 7 ಲಕ್ಷ ರೂಪಾಯಿ ನೀಡಿದೆ.
ಸಂಪೂರ್ಣ ಸುಸಜ್ಜಿತವಾಗಿ ಈ ಪಾರ್ಕ್ ನಿರ್ಮಾಣಗೊಳ್ಳುತ್ತಿದೆ. ಸುತ್ತಲಿನ ಪರಿಸರದ ಮಕ್ಕಳು ಹಾಗೂ ಹಿರಿಯರಿಗೆ ಒಂದು ಅತ್ಯುತ್ತಮ ಪಾರ್ಕ್ ಆಗಿ ರೂಪುಗೊಳ್ಳಲಿದೆ.