LATEST NEWS
ಮಂಗಳೂರು-ಬೆಂಗಳೂರು ನಡುವೆ ಹೊಸ ರಾತ್ರಿ ರೈಲು ಸಂಚಾರ

ಮಂಗಳೂರು-ಬೆಂಗಳೂರು ನಡುವೆ ಹೊಸ ರಾತ್ರಿ ರೈಲು ಸಂಚಾರ
ಮಂಗಳೂರು ಜನವರಿ 31: ಮಂಗಳೂರು ಬೆಂಗಳೂರು ನಡುವೆ ಹೊಸ ರಾತ್ರಿ ರೈಲು ಹೋರಾಟ ನಡೆಸಲಿದೆ. ಯಶವಂತಪುರ (ಬೆಂಗಳೂರು) – ಶ್ರವಣಬೆಳಗೊಳ – ಹಾಸನ – ಮಂಗಳೂರು ಸೆಂಟ್ರಲ್ ನಡುವೆ ವಾರದಲ್ಲಿ ಮೂರು ದಿನ ಈ ಹೊಸ ರೈಲು ಸಂಚಾರ ನಡೆಸಲಿದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.
ಯಶವಂತಪುರ ರೈಲು ನಿಲ್ದಾಣದಿಂದ ಮಂಗಳವಾರ, ಶುಕ್ರವಾರ, ಭಾನುವಾರ ಸಂಜೆ 4.30ಕ್ಕೆ ಹೊರಟು, ರಾತ್ರಿ 8 ಗಂಟೆಗೆ ಹಾಸನ ರೈಲು ನಿಲ್ದಾಣಕ್ಕೆ ಬರಲಿದೆ. ಬೆಳಗಿನ ಜಾವ 4.30ಕ್ಕೆ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ತಲುಪಲಿದೆ. ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ಸೋಮವಾರ, ಬುಧವಾರ, ಶನಿವಾರ ಸಂಜೆ 7 ಗಂಟೆಗೆ ಹೊರಟು ರಾತ್ರಿ 1.30ಕ್ಕೆ ಹಾಸನ ಹಾಗೂ ಬೆಳಗಿನ ಜಾವ 4.30ಕ್ಕೆ ಯಶವಂತಪುರ ರೈಲು ನಿಲ್ದಾಣ ತಲುಪಲಿದೆ.

ನೈರುತ್ಯ ರೈಲ್ವೆ ವಲಯ ಸಲ್ಲಿಸಿದ್ದ ಪ್ರಸ್ತಾವಕ್ಕೆ ರೈಲ್ವೆ ಮಂಡಳಿ ಒಪ್ಪಿಗೆ ನೀಡಿದ್ದು, ರೈಲು ಸಂಚಾರ ಆರಂಭದ ದಿನಾಂಕ ನಿಗದಿಯಾಗಬೇಕಾಗಿದೆ.