Connect with us

LATEST NEWS

ಹೊಸ ರೀತಿಯ ಲಾಕ್‌ಡೌನ್‌ ವೇಳೆ ಏನಿರುತ್ತೆ? ಏನಿರಲ್ಲ?…

ಹೊಸ ರೀತಿಯ ಲಾಕ್‌ಡೌನ್‌ ವೇಳೆ ಏನಿರುತ್ತೆ? ಏನಿರಲ್ಲ?…

ನವದೆಹಲಿ, ಮೇ.17: ದೇಶದಲ್ಲಿ ಸದ್ಯಕ್ಕೆ ಲಾಕ್ ಡೌನ್ ಮುಗಿಯುವ ಲಕ್ಷಣ ಕಾಣಿಸುತ್ತಾ ಇಲ್ಲ. ಕೇಂದ್ರ ಸರಕಾರ ಸದ್ಯ ಇರುವ ಲಾಕ್​ಡೌನ್​ ಅವಧಿಯನ್ನು ಇನ್ನೂ ಎರಡುವಾರಗಳ ಕಾಲ ಅಂದರೆ ಮೇ 31ರವರೆಗೆ ವಿಸ್ತರಣೆ ಮಾಡಿ ಆದೇಶ ನೀಡಿದ್ದು, ಲಾಕ್​ಡೌನ್​ 4.0 ಹೊಸ ನಿಯಮಗಳೊಂದಿಗೆ ಜಾರಿಯಾಗಿದೆ.

ಲಾಕ್ ಡೌನ್ 4.0 ನಲ್ಲಿನ ಹೊಸ ಮಾರ್ಗಸೂಚಿಗಳು ಈ ಕೆಳಗಿನಂತಿವೆ
ಲಾಕ್ ಡೌನ್ 4.0 ನಲ್ಲಿ ಅನುಮತಿಸಲಾದ ಚಟುವಟಿಕೆಗಳು

* ಕ್ರೀಡಾ ಕಾಂಪ್ಲೆಕ್ಸ್‌ಗಳು, ಸ್ಟೇಡಿಯಂಗಳು ತೆರೆಯಬಹುದು. ವೀಕ್ಷಕರಿಗೆ ಪ್ರವೇಶ ನೀಡುವಂತಿಲ್ಲ
* ಕಂಟೈನ್‌ಮೆಂಟ್ ಪ್ರದೇಶ ಹೊರತುಪಡಿಸಿ ಅಂತರರಾಜ್ಯ ಪ್ರಯಾಣಿಕ ವಾಹನಗಳ ಹಾಗೂ ಬಸ್ ಸಂಚಾರಕ್ಕೆ ಅನುಮತಿ. ಉಭಯ       ರಾಜ್ಯಗಳ ಸಮ್ಮತಿಯೊಂದಿಗೆ ಸಂಚಾರ ಕೈಗೊಳ್ಳಬಹುದು
* ಕೆಂಪು, ಹಸಿರು, ಕಿತ್ತಳೆ ವಲಯಗಳನ್ನು ರಾಜ್ಯಗಳು ನಿರ್ಧರಿಸಬೇಕು. ಕೆಂಪು ಮತ್ತು ಕಿತ್ತಳೆ ವಲಯಗಳಲ್ಲಿ ಕಂಟೈನ್‌ಮೆಂಟ್ ವಲಯಗಳನ್ನು ಜಿಲ್ಲಾ ಅಧಿಕಾರಿಗಳು ಗುರುತಿಸಬೇಕು
* ಕಂಟೈನ್‌ಮೆಂಟ್ ವಲಯಗಳಲ್ಲಿ ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ
* ವಿಶೇಷ ನಿರ್ಬಂಧ ವಿಧಿಸದೇ ಇರುವ ಚಟುವಟಿಕೆಗಳಿಗೆ ಅನುಮತಿ ಇದೆ
* ಆರೋಗ್ಯ ಕಾರ್ಯಕರ್ತರು ಮತ್ತು ಅಧಿಕಾರಿಗಳ ಅಂತರರಾಜ್ಯ ಪ್ರಯಾಣ ಮತ್ತು ರಾಜ್ಯದೊಳಗಿನ ಪ್ರಯಾಣಕ್ಕೆ ನಿರ್ಬಂಧ ವಿಧಿಸುವಂತಿಲ್ಲ
* ಎಲ್ಲ ರೀತಿಯ ಸರಕು ಸಾಗಣೆ ವಾಹನಗಳ ಅಂತರರಾಜ್ಯ ಪ್ರಯಾಣಕ್ಕೆ ಎಲ್ಲ ರಾಜ್ಯಗಳೂ ಅನುಮತಿ ನೀಡಬೇಕು. ಖಾಲಿ ಟ್ರಕ್‌ಗಳ ಸಂಚಾರಕ್ಕೂ ಅವಕಾಶ ನೀಡಬೇಕು

ಲಾಕ್ ಡೌನ್ 4.0 ನಿರ್ಬಂಧ ಇರುವ ಚಟುವಟಿಕೆಗಳು

* ದೇಶೀಯ ಮತ್ತು ಅಂತರರಾಷ್ಟ್ರೀಯ ಪ್ರಯಾಣ
* ಮೆಟ್ರೊ ರೈಲು ಸೇವೆ
* ಶೈಕ್ಷಣಿಕರ ಸಂಸ್ಥೆಗಳು ತೆರೆಯಬಾರದು
* ಹೋಟೆಲ್, ರೆಸ್ಟೋರೆಂಟ್ ಮತ್ತು ಇತರ ಆತಿಥ್ಯ ಸೇವೆಗಳು
* ಚಿತ್ರ ಮಂದಿರಗಳು, ಮಾಲ್‌, ಜಿಮ್‌, ಈಜುಕೊಳ, ಬಾರ್‌ಗಳು, ಥಿಯೇಟರ್‌ಗಳು ತೆರೆಯುವುದಿಲ್ಲ
* ಗುಂಪು ಸೇರುವಂತಿಲ್ಲ
* ಧಾರ್ಮಿಕ ಕೇಂದ್ರಗಳು ತೆರಯುವಂತಿಲ್ಲ
* ರಾತ್ರಿ 7ರಿಂದ ಬೆಳಿಗ್ಗೆ 7ರ ವರೆಗಿನ ಕರ್ಫ್ಯೂ ಮುಂದುವರಿಕೆ
* 65 ವರ್ಷಕ್ಕಿಂತ ಮೇಲಿನ ವಯಸ್ಸಿನವರು, ಗರ್ಭಿಣಿಯರು, 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮನೆಯಲ್ಲೇ ಇರಬೇಕು
* ರಾಜ್ಯ ಸರ್ಕಾರಗಳು ಪರಿಸ್ಥಿತಿ ನೋಡಿಕೊಂಡು ವಿವಿಧ ವಲಯಗಳಲ್ಲಿ ನಿರ್ದಿಷ್ಟ ಚಟುವಟಿಕೆಗಳನ್ನು ನಿಷೇಧಿಸಬಹುದಾಗಿದೆ. ಅಗತ್ಯವೆನಿಸಿದಲ್ಲಿ ನಿರ್ಬಂಧಗಳನ್ನು ವಿಧಿಸಬಹುದಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *