LATEST NEWS
ನವದೆಹಲಿ: ₹1,600 ಕೋಟಿ ಮೌಲ್ಯದ ಡ್ರಗ್ಸ್ ನಾಶಪಡಿಸಿದ ಪೊಲೀಸರು
ನವದೆಹಲಿ, ಫೆಬ್ರವರಿ 21: ದೆಹಲಿ ಪೊಲೀಸರು 2009 ಮತ್ತು 2023ರ ನಡುವೆ ವಶಪಡಿಸಿಕೊಂಡ ₹1,600 ಕೋಟಿ ಮೌಲ್ಯದ 10 ಟನ್‌ಗೂ ಹೆಚ್ಚು ಡ್ರಗ್ಸ್ ನಾಶಪಡಿಸಿದ್ದಾರೆ.
ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರ ಸಮ್ಮುಖದಲ್ಲಿ ಮಾದಕವಸ್ತು (ಡ್ರಗ್ಸ್)ವನ್ನು ನಾಶಪಡಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಗವರ್ನರ್ ವಿ.ಕೆ. ಸಕ್ಸೇನಾ, ಕಳೆದ 14 ವರ್ಷಗಳಲ್ಲಿ ವಶಪಡಿಸಿಕೊಂಡಿರುವ ಮಾದಕವಸ್ತು ನಾಶಪಡಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಕನಸಿನಂತೆ ‘ಡ್ರಗ್ಸ್ ಮುಕ್ತ ಭಾರತ‘ ಮಾಡುವ ನಿಟ್ಟಿನಲ್ಲಿ ಇದು ಒಂದು ದೊಡ್ಡ ಹೆಜ್ಜೆಯನ್ನು ಸೂಚಿಸುತ್ತದೆ ಎಂದು ಹೇಳಿದ್ದಾರೆ.
Set in motion the destruction of over 10 tonnes of drugs & contrabands worth Rs 1600 crore, seized by Delhi Police in the National Capital between 2009 & 2023. This marks a big stride towards making a "Nasha Mukt Bharat", as envisioned by Hon'ble PM Shri Narendra Modi. pic.twitter.com/N8U5OQFlC9
— LG Delhi (@LtGovDelhi) February 20, 2024
ಯುವಕರು ಡ್ರಗ್ಸ್ ವಿರುದ್ಧ ದೃಢವಾಗಿ ನಿಲ್ಲುವಂತೆ ಕರೆ ನೀಡಿದ ಅವರು, ಪೊಲೀಸರ ಕೆಲಸಕ್ಕೆ ಶ್ಲಾಘನೆ ವ್ಯಕ್ತಪಡಿಸಿ ಪೋಸ್ಟ್ ಮಾಡಿದ್ದಾರೆ.