LATEST NEWS
ನೆಲ್ಲಿದಡಿಗುತ್ತಿನ ದೇವಾರಾಧನೆ ಅಡ್ಡಿಪಡಿಸಿದ್ದು ಯಾರು ಎಂದು ಡಿಸಿ ಪ್ರಶ್ನೆ – ತೊಂದರೆ ಆಗಿಲ್ಲ ಎಂದ ಗುತ್ತಿನಮನೆಯವರು..ವಿವಾದ ಎಬ್ಬಿಸಿದ್ದು ಯಾರು…?

ಮಂಗಳೂರು ಮಾರ್ಚ್ 09: ನೆಲ್ಲಿದಡಿಗುತ್ತಿನ ಕಾಂತೇರಿ ಜುಮಾದಿ ದೈವಾರಾಧನೆಗೆ ಎಂಎಸ್‌ಇಜೆಡ್ ಅಧಿಕಾರಿಗಳು ಅಡ್ಡಪಡಿಸಿದ್ದಾರೆ ಎಂಬ ವಿವಾದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆದಿದ್ದು, ಎಂಎಸ್‌ಇಜೆಡ್ ವ್ಯಾಪ್ತಿಯ ನೆಲ್ಲಿದಡಿ ಗುತ್ತಿನ ಕಾಂತೇರಿ ಜುಮಾದಿ ದೈವಾರಾಧನೆಗೆ ಸಂಬಂಧಿಸಿದ ಆಚರಣೆ ಮುಂದುವರಿಸುವುದಕ್ಕೆ ಯಾವುದೇ ಅಡ್ಡಿ ಇಲ್ಲ ಎಂದು ಜಿಲ್ಲಾಧಿಕಾರಿ ಮುಲೈ ಮುಗಿಲನ್ ಎಂಪಿ ಹಾಗೂ ಎಂಎಸ್‌ಇಜೆಡ್ ಅಧಿಕಾರಿಗಳು ಸ್ಪಷ್ಟಪಡಿಸಿದರು. ಈ ವಿವಾದ ಹೇಗೆ ಪ್ರಾರಂಭವಾಗಿದೆ ಎನ್ನವುದು ಸ್ವತಃ ಗುತ್ತಿನಮನೆಯವರಿಗೆ ತಿಳಿದಿಲ್ಲ.

ನೆಲ್ಲಿದಡಿ ಗುತ್ತಿನ ಕಾಂತೇರಿ ಜುಮಾದಿ ದೈವಾರಾಧನೆಗೆ ಅಡ್ಡಿಪಡಿಸಲಾಗುತ್ತದೆ ಎಂಬ ಆರೋಪ ಕೇಳಿಬಂದಿದ್ದರಿಂದ, ಈ ವಿಚಾರ ಇತ್ಯರ್ಥ ಪಡಿಸಲು ಸಂಸದ ಕ್ಯಾ.ಬ್ರಿಜೇಶ್ ಚೌಟ ನೇತೃತ್ವದಲ್ಲಿ ಶನಿವಾರ ಸಭೆ ನಡೆಯಿತು. ಈ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ, ‘ಆಚರಣೆಗೆ ಈ ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ ನೀವು ದೈವದ ಆಚರಣೆ ಮಾಡಿಲ್ಲವೇ, ಈಗ ನಿಮಗೆ ಆಗಿರುವ ತೊಂದರೆಯೇನು. ಸಮಸ್ಯೆ ದಿಢೀರ್ ಉದ್ಭವಿಸಿದ್ದು ಏಕೆ’ ಎಂದು ಗುತ್ತಿನಮನೆಯವರನ್ನು ಪ್ರಶ್ನಿಸಿದರು.

ಈ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ, ಆಚರಣೆಗೆ ಈ ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ ನೀವು ದೈವದ ಆಚರಣೆ ಮಾಡಿಲ್ಲವೇ, ಈಗ ನಿಮಗೆ ಆಗಿರುವ ತೊಂದರೆಯೇನು. ಸಮಸ್ಯೆ ದಿಢೀರ್ ಉದ್ಭವಿಸಿದ್ದು ಏಕೆ’ ಎಂದು ಗುತ್ತಿನಮನೆಯವರನ್ನು ಪ್ರಶ್ನಿಸಿದರು. ‘ಸಂಕ್ರಾಂತಿ ಆಚರಣೆಗೆ ತೊಂದರೆಯಾಗಿಲ್ಲ. ಆದರೆ ಈ ಸಲ ಅನುಮತಿ ಕೇಳಿದಾಗ ಎಂಎಸ್‌ಇಜೆಡ್ ಅಧಿಕಾರಿಗಳು, ‘ಮುಂದೆ ಚೆನ್ನೈ ವಿಭಾಗದಲ್ಲೇ ಅನುಮತಿ ಕೇಳಬೇಕು’ ಎಂದರು. ಹಾಗಾಗಿ ಗೊಂದಲ ಆಗಿದೆ’ ಎಂದರು. ಆ ಬಳಿಕವೂ ದೈವದ ಕಾರ್ಯಕ್ಕೆ ಅಡ್ಡಿಯಾಗಿಲ್ಲ ಅಲ್ಲವೇ’ ಎಂದು ಜಿಲ್ಲಾಧಿಕಾರಿ ಪ್ರಶ್ನಿಸಿದಾಗ ‘ತೊಂದರೆ ಆಗಿಲ್ಲ’ ಎಂದರು.
ಶಾಸಕ ಉಮಾನಾಥ ಕೋಟ್ಯಾನ್, ‘ಹಾಗಾದರೆ ಈ ವಿಚಾರ ದೀಢೀರ್ ಎದ್ದಿದ್ದು ಹೇಗೆ’ ಎಂದು ಪ್ರಶ್ನಿಸಿದರು. ‘ನಮಗೇನು ಗೊತ್ತಿಲ್ಲ, ನಾವೇನೂ ಹೋರಾಟ ಎಬ್ಬಿಸಿಲ್ಲ’ ಎಂದು ಅಲ್ಲಿದ್ದವರು ಉತ್ತರಿಸಿದರು.
“ಅಲ್ಲಿ ರಸ್ತೆ ಇದ್ದರೂ, ಒಳಗೆ ಹೋಗಲು ಬಿಡುವುದಿಲ್ಲ. ಪ್ರತಿ ಸಲ ಅನುಮತಿ ಕೇಳುವ ಸ್ಥಿತಿ ಬರಬಾರದು’ ಎಂದು ಶ್ರೀಕಾಂತ್ ಶೆಟ್ಟಿ ಹೇಳಿದರು. ಸಂಸದ ಬ್ರಿಜೇಶ್ ಚೌಟ, ‘ನಮಗೆ ದೈವಾರಾಧನೆಗೆ ಅಡ್ಡಿಯಾಗಬಾರದು ಎಂಬ ಆಸ್ಥೆ ನಮಗೂ ಇದೆ. ಶಾಶ್ವತ ಪರಿಹಾರಕ್ಕೆ ವ್ಯವಸ್ಥೆ ಕಂಡುಕೊಳ್ಳಿ’ ಎಂದು ಎಂಸ್‌ಇಜೆಡ್ ಎಂ.ಡಿ. ಸೂರ್ಯನಾರಾಯಣ ಅವರಿಗೆ ಸೂಚಿಸಿದರು.