Connect with us

LATEST NEWS

ಪ್ಯಾರಿಸ್ ಡೈಮಂಡ್ ಲೀಗ್ ಗೆದ್ದ ನೀರಜ್ ಚೋಪ್ರಾ

ಭಾರತದ ಜಾವೆಲಿನ್ ತಾರೆ ನೀರಜ್ ಚೋಪ್ರಾ ಪ್ಯಾರಿಸ್ ಡೈಮಂಡ್ ಲೀಗ್​ನಲ್ಲಿ ಪ್ರಶಸ್ತಿಗೆ ಮುಡಿಗೇರಿಸಿಕೊಂಡಿದ್ದಾರೆ. ಅದು ಕೂಡ ಜರ್ಮನಿಯ ಚಾಂಪಿಯನ್​ ಜಾವೆಲಿನ್ ಎಸೆತಗಾರ ಜೂಲಿಯನ್ ವೆಬರ್ ಅವರನ್ನು ಹಿಂದಿಕ್ಕುವ ಮೂಲಕ ಎಂಬುದು ವಿಶೇಷ. 2023 ರಲ್ಲಿ ಲೌಸಾನ್ನೆ ನಂತರ ಡೈಮಂಡ್ ಲೀಗ್​ನಲ್ಲಿ ಪ್ರಶಸ್ತಿ ಗೆದ್ದಿದ್ದ ನೀರಜ್ ಚೋಪ್ರಾ ಇದೀಗ ಮತ್ತೊಮ್ಮೆ ಡೈಮಂಡ್ ಲೀಗ್​ನಲ್ಲಿ ಎಲ್ಲರನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾಗಿದ್ದಾರೆ.

ನೀರಜ್ ಚೋಪ್ರಾ 2025ರ ಮೊದಲ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ವಿಶೇಷ ಎಂದರೆ ನೀರಜ್ ಪ್ಯಾರಿಸ್ ಡೈಮಂಡ್ ಲೀಗ್‌ನಲ್ಲಿ ಕಾಣಿಸಿಕೊಳ್ಳುತ್ತಿರುವುದು 8 ವರ್ಷಗಳ ಬಳಿಕ. ಅಂದರೆ ಕೊನೆಯ ಬಾರಿ ಅವರು ಪ್ಯಾರಿಸ್​ನಲ್ಲಿ ನಡೆದ ಜೂನಿಯರ್ ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಸ್ಪರ್ಧಿಸಿದ್ದರು.

ಎಂಟು ವರ್ಷಗಳ ಬಳಿಕ ಪ್ಯಾರಿಸ್​ ಡೈಮಂಡ್ ಲೀಗ್​ಗೆ ಮರಳಿದ ನೀರಜ್ ಚೋಪ್ರಾ ಅವರು ತಮ್ಮ ಮೊದಲ ಪ್ರಯತ್ನದಲ್ಲೇ 88.16 ಮೀಟರ್ ಎಸೆತದೊಂದಿಗೆ ಶುಭಾರಂಭ ಮಾಡಿದ್ದರು. ಈ ಎಸೆತವೇ ಇತರ ಸ್ಪರ್ಧಿಗಳಿಗೆ ಗುರಿಯಾಗಿ ಮಾರ್ಪಟ್ಟಿತ್ತು.

ಇತ್ತ ನೀರಜ್ ಚೋಪ್ರಾ ಎರಡನೇ ಪ್ರಯತ್ನದಲ್ಲಿ 85.10 ಮೀಟರ್ ದೂರ ಎಸೆದಿದ್ದರು. ಆದರೆ ಕಠಿಣ ಪ್ರತಿ ಸ್ಪರ್ಧಿ ವೆಬರ್ ಈ ವೇಳೆ 87.88 ಮೀಟರ್ ತಲುಪಿದ್ದರು. ಇದಾದ ಬಳಿಕ ಲಯ ತಪ್ಪಿದ ನೀರಜ್ ಸತತ ಮೂರು ಫೌಲ್ ಎಸೆತಗಳನ್ನು ಎಸೆದರು. ಅತ್ತ ಹವಾಮಾನ ಬದಲಾದಂತೆ, ಇತರ ಸ್ಪರ್ಧಿಗಳಿಗೂ ಥ್ರೋಗಳು ಕಠಿಣವಾದವು.

ನೀರಜ್ ಚೋಪ್ರಾ ತನ್ನ ಅಂತಿಮ ಪ್ರಯತ್ನದಲ್ಲಿ 82.89 ಮೀಟರ್ ದೂರಕ್ಕೆ  ಎಸೆಯಲಷ್ಟೇ ಶಕ್ತರಾಗಿದ್ದರು. ಇದರ ನಡುವೆ ಮೌರಿಸಿಯೊ ಲೂಯಿಜ್ ಡ ಸಿಲ್ವಾ 86.62 ಮೀಟರ್ ದೂರಕ್ಕೆ ಎಸೆದು ಪೈಪೋಟಿಗೆ ಇಳಿದರು. ಅತ್ತ ಜೂಲಿಯನ್ ವೆಬರ್ ಸತತ ಪ್ರಯತ್ನ ನಡೆಸಿದರೂ, ನೀರಜ್ ಚೋಪ್ರಾ ಅವರ 88.16 ಮೀಟರ್ ಗುರಿಯನ್ನು ದಾಟಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ನೀರಜ್ ಚೋಪ್ರಾ ಮೊದಲ ಎಸೆತದಲ್ಲಿ ಕ್ರಮಿಸಿದ 88.16 ಮೀಟರ್​ ಮೊದಲ ಸ್ಥಾನವನ್ನು ಪಡೆದುಕೊಂಡಿತು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *