LATEST NEWS
ತಮ್ಮ ವಾಯುನೆಲೆಗಳ ಮೇಲೆ ಭಾರತ ದಾಳಿ ಮಾಡಿದೆ ಎಂದು ಕೊನೆಗೂ ಒಪ್ಪಿಕೊಂಡ ಪಾಕಿಸ್ತಾನದ ಪ್ರಧಾನಿ

ಪಾಕಿಸ್ತಾನ ಮೇ 17: ಭಾರತ ತಮ್ಮ ವಾಯುನೆಲೆಗಳ ಮೇಲೆ ದಾಳಿಯೇ ಮಾಡಿಲ್ಲ ಅದೆಲ್ಲಾ ಸುಳ್ಳು ಎಂದು ಅಂತರಾಷ್ಟ್ರೀಯ ಮಾಧ್ಯಮಗಳ ಮುಂದೆ ಸುಳ್ಳು ಹೇಳಿ ತಿರುಗಾಡುತ್ತಿದ್ದ ಪಾಕಿಸ್ತಾನ ಇದೀಗ ಕೊನೆಗೂ ಭಾರತದ ದಾಳಿ ಬಗ್ಗೆ ಒಪ್ಪಿಕೊಂಡಿದೆ.
ಭಾರತ ನಮ್ಮ ಮೇಲೆ ದಾಳಿ ಮಾಡಿದೆ, ನಮ್ಮ ವಾಯುನೆಲೆಗಳನ್ನು ಉಡಾಯಿಸಿದೆ ಎಂದು ಸ್ವತಃ ಪಾಕ್ ಪ್ರಧಾನಿಯೇ ಒಪ್ಪಿಕೊಂಡಿದ್ದಾರೆ. ಅವರು ಇಸ್ಲಾಮಾಬಾದ್‌ನಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿ, ಭಾರತ ನಡೆಸಿದ ಕ್ಷಿಪಣಿ ದಾಳಿಯ ಬಗ್ಗೆ ಸೇನಾ ಮುಖ್ಯಸ್ಥ ಜನರಲ್ ಸೈಯದ್ ಅಸಿಮ್ ಮುನೀರ್ ಅವರು ಬೆಳಗಿನ ಜಾವ 2:30 ಕ್ಕೆ ಕರೆ ಮಾಡಿ ಎಲ್ಲವನ್ನು ವಿವರಿಸಿದರು ಎಂದು ಹೇಳಿಕೊಂಡಿದ್ದಾರೆ.

ಮೇ 9-10ರ ಮಧ್ಯರಾತ್ರಿ, ಬೆಳಗಿನ ಜಾವ 2:30 ರ ಸುಮಾರಿಗೆ, ಜನರಲ್ ಆಸಿಫ್ ಮುನೀರ್ ಫೋನ್ ಮೂಲಕ ಕರೆ ಮಾಡಿ, ಭಾರತ ನಮ್ಮ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಿದೆ ಎಂದು ಹೇಳಿದರು. ನೂರ್ ಖಾನ್ ವಾಯುನೆಲೆ ಮತ್ತು ಕೆಲವು ಇತರ ಪ್ರದೇಶಗಳ ಮೇಲೆ ದಾಳಿ ಮಾಡಿದೆ. ಎಂದು ಪ್ರಧಾನಿ ಷರೀಫ್ ಸಾರ್ವಜನಿಕ ಭಾಷಣದಲ್ಲಿ ಹೇಳಿಕೊಂಡಿದ್ದಾರೆ. ರಾವಲ್ಪಿಂಡಿ ಮತ್ತು ಇಸ್ಲಾಮಾಬಾದ್ ನಡುವೆ ಇರುವ ನೂರ್ ಖಾನ್ ವಾಯುನೆಲೆಯು, ಪಾಕಿಸ್ತಾನದ ವಾಯು ಕಾರ್ಯಾಚರಣೆಗೆ ಕೇಂದ್ರ ಬಿಂದುವಾಗಿದೆ. ಜತೆಗೆ ಇದು ಒಂದು ಕಾರ್ಯತಂತ್ರದ ಮಿಲಿಟರಿ ಸೌಲಭ್ಯವಾಗಿದೆ. ಇದು ಹಿಂದೆ ಚಕ್ಲಾಲಾ ವಾಯುನೆಲೆ ಎಂದು ಕರೆಯಲ್ಪಡುತ್ತಿತ್ತು. ಇದನ್ನು 1971 ರ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ಭಾರತೀಯ ಪಡೆಗಳನ್ನು ಗುರಿಯಾಗಿ ನಿರ್ಮಾಣ ಮಾಡಲಾಗಿತ್ತು.