LATEST NEWS
15000 ರೂಪಾಯಿ ನೀಡಿ ದುಬೈಗೆ ಎರ್ ಇಂಡಿಯಾ ವಿಮಾನದಲ್ಲಿ ಏಕಾಂಗಿ ಪ್ರಯಾಣ…!!
ನವದೆಹಲಿ: 200ಕ್ಕೂ ಅಧಿಕ ಸೀಟ್ ಇರುವ ಎರ್ ಇಂಡಿಯಾ ವಿಮಾನದಲ್ಲಿ ಕೇವಲ 15000 ರೂಪಾಯಿ ನೀಡಿ ಓಬ್ಬನೆ ಪ್ರಯಾಣಿಸಿದರೇ ಹೇಗೆ…? ಹೌದು ಮಹಾರಾಜನ ರೀತಿ ಅಮೃತಸರ್ ನಿಂದ ದುಬೈಗೆ ಎರ್ ಇಂಡಿಯಾ ವಿಮಾನದಲ್ಲಿ ಓಬ್ಬರೆ ಪ್ರಯಾಣಿಸಿದ ಘಟನೆ ಜೂನ್ 23 ರಂದು ನಡೆದಿದೆ.
ಯುಎಇ ಮೂಲದ ಭಾರತೀಯ ಉದ್ಯಮಿಯೊಬ್ಬರು ಅಮೃತಸರದಿಂದ ದುಬೈಗೆ ಏರ್ ಇಂಡಿಯಾ ಅಂತರರಾಷ್ಟ್ರೀಯ ವಿಮಾನದಲ್ಲಿ ಏಕಾಂಗಿಯಾಗಿ ಪ್ರಯಾಣಿಸಿದ್ದಾರೆ. ಅದೂ ಕೇವಲ 15000 ರೂಪಾಯಿಗೆ. ಉದ್ಯಮಿ ಮತ್ತು ದಾನಿಯಾಗಿರುವ ಎಸ್‌ಪಿ ಸಿಂಗ್ ಒಬೆರಾಯ್, ಬುಧವಾರ ಬೆಳಗ್ಗೆ ನಾಲ್ಕು ಗಂಟೆಗೆ ಅಮೃತಸರದಿಂದ ದುಬೈಗೆ ತೆರಳಿದ ಏರ್ ಇಂಡಿಯಾ (AI-929) ವಿಮಾನದಲ್ಲಿ ಏಕೈಕ ಪ್ರಯಾಣಿಕರಾಗಿದ್ದರು.
ಎಸ್‌ಪಿ ಸಿಂಗ್, 10 ವರ್ಷಗಳ ಅವಧಿಯ ದುಬೈ ಗೋಲ್ಡನ್ ವೀಸಾ ಪಡೆದಿದ್ದು, ಅಲ್ಲಿ ಅವರ ಉದ್ಯಮ ಕೂಡ ಇದೆ. ಹೀಗಾಗಿ ಕೊರೊನಾ ಲಾಕ್ ಡೌನ್ ನಿಂದ ಅಂತರಾಷ್ಟ್ರೀಯ ಸಂಚಾರ ಬಂದ್ ಆಗಿದ್ದರೂ ಕೂಡ ದುಬೈ ವೀಸಾ ಇರುವ ಹಿನ್ನಲೆ ಅವರಿಗೆ ಸಂಚಾರಕ್ಕೆ ಅವಕಾಶ ಸಿಕ್ಕಿತ್ತು. ಈ ಹಿನ್ನಲೆ ಅಮೃತ್ ಸರ್ ನಿಂದ ದುಬೈಗೆ ಏರ್ ಇಂಡಿಯಾ ಸಿಂಗ್ 750 ದಿರ್ಹಂ (ಅಂದಾಜು ₹15,000) ತೆತ್ತು ಟಿಕೆಟ್ ಖರೀದಿಸಿದ್ದರು.
ಈ ಕುರಿತಂತೆ ತಮ್ಮ ಅನುಭವ ಹಂಚಿಕೊಂಡಿರುವ ಅವರು ಈ ಪ್ರಯಾಣವು ನನಗೆ ಮಹಾರಾಜನ ಅನುಭವ ನೀಡಿತು ಎಂದು ಸಿಂಗ್ ಹೇಳಿದ್ದಾರೆ. ಪ್ರಯಾಣದ ಅವಧಿಯಲ್ಲಿ ಸಿಬ್ಬಂದಿ ನನ್ನನ್ನು ಚೆನ್ನಾಗಿ ನೋಡಿಕೊಂಡರು. ಒಟ್ಟಾರೆಯಾಗಿ ಈ ಅನುಭವ ಚೆನ್ನಾಗಿತ್ತು. ಆದರೆ ಯಾರೂ ಜತೆಗಿಲ್ಲದೆ ಬೋರ್ ಅನ್ನಿಸತೊಡಗಿತು ಎಂದು ಸಿಂಗ್ ತಿಳಿಸಿದ್ದಾರೆ. ದುಬೈಗೆ ತೆರಳಿದಾಗಿ ಕೊರೊನಾ ಪರೀಕ್ಷೆ ನಡೆಸಿದ ವಿಮಾನ ನಿಲ್ದಾಣದ ಸಿಬ್ಬಂದಿ ನಂತರ ಇನ್ನುಳಿದ ಪ್ರಯಾಣಿಕರೆಲ್ಲಿ ಎಂದು ಕೇಳಿದ್ದರು, ಆದರೆ ನಾನು ಏಕಾಂಗಿಯಾಗಿ ಬಂದಿದ್ದೇನೆ ಎಂದಾಗ ಅವರಿಗೆಲ್ಲಾ ಶಾಕ್ ಆಗಿತ್ತು ಎಂದು ತಮ್ಮ ಅನುಭವ ತಿಳಿಸಿದ್ದಾರೆ.