Connect with us

    DAKSHINA KANNADA

    ಕರ್ನಾಟಕದಲ್ಲಿ NDA 25; ಬೆಂಗಳೂರು cong 1 ಎನ್‌ಡಿಎ ಕೂಟ 411, INDA ಒಕ್ಕೂಟ 105, ಇತರ 27 : ಇದು ನ್ಯೂಸ್ 18 ಸಮೀಕ್ಷೆ..!

    ಹೊಸದಿಲ್ಲಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನ್ಯೂಸ್‌18 ದೇಶದಲ್ಲಿ ನಡೆಸಿದ ಸಮೀಕ್ಷೆ ಫಲಿತಾಂಶ ಹೊಬಿದ್ದಿದೆ . ಸಮೀಕ್ಷೆ ಪ್ರಕಾರ ಕರ್ನಾಟಕದ 28 ಕ್ಷೇತ್ರಗಳಲ್ಲಿ NDA 25 ಕ್ಷೇತ್ರಗಳನ್ನು ಗೆಲ್ಲಲಿದ್ದು, ಕಾಂಗ್ರೆಸ್‌ 3 ಸ್ಥಾನಕ್ಕೆ ತೃಪ್ತಿ ಪಡಲಿದೆ.

    ಎನ್‌ಡಿಎ ಶೇ.58 ಮತ್ತು ಕಾಂಗ್ರೆಸ್‌ ಶೇ.35 ಮತ ಗಳಿಸಲಿವೆ ಸಮೀಕ್ಷೆ ಹೇಳಿದೆ. ಇನ್ನು ದೇಶಾದ್ಯಂತ ಎನ್‌ಡಿಎ 411, INDA ಒಕ್ಕೂಟ 105 ಮತ್ತು ಇತರರು 27 ಸ್ಥಾನಗಳನ್ನು ಜಯಿಸಲಿದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ.
    ರಾಜ್ಯದಲ್ಲಿ ಬೆಂಗಳೂರು ಭಾಗದ 5 ಲೋಕಸಭಾ ಕ್ಷೇತ್ರಗಳ ಪೈಕಿ 1ರಲ್ಲಿ ಕಾಂಗ್ರೆಸ್‌ ಮತ್ತು 4ರಲ್ಲಿ ಎನ್‌ಡಿಎ ಗೆಲ್ಲಲಿದೆ. ಉತ್ತರ ಕರ್ನಾಟಕದ 11 ಕ್ಷೇತ್ರಗಳಲ್ಲಿ 1ರಲ್ಲಿ ಕಾಂಗ್ರೆಸ್‌ ಮತ್ತು 10ರಲ್ಲಿ ಎನ್‌ಡಿಎ ಜಯ ಗಳಿಸಿದರೆ, ಕರಾವಳಿ ಭಾಗದ ಮೂರೂ ಕ್ಷೇತ್ರಗಳು ಎನ್‌ಡಿಎ ಪಾಲಾಗಲಿವೆ. ಹಾಗೆಯೇ, ದಕ್ಷಿಣ ಕರ್ನಾಟಕದ 9 ಲೋಕಸಭಾ ಕ್ಷೇತ್ರಗಳ ಪೈಕಿ 8 ಕ್ಷೇತ್ರಗಳಲ್ಲಿ ಎನ್‌ಡಿಎ ಮತ್ತು 1 ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲುವಿನ ನಗೆ ಬೀರಲಿದೆ ಎಂದು ಸಮೀಕ್ಷೆ ಹೇಳಿದೆ.

     

    Share Information
    Advertisement
    Click to comment

    Leave a Reply

    Your email address will not be published. Required fields are marked *