Connect with us

    FILM

    ತನಿಖೆಗೆ ಹೆದರಿ ಮದುವೆ ಗುಟ್ಟು ರಟ್ಟು ಮಾಡಿದ ನಟಿ ನಯನತಾರಾ….!!

    ಚೆನ್ನೈ ಅಕ್ಟೋಬರ್ 17: ಮದುವೆ ಆಗಿ ನಾಲ್ಕೇ ತಿಂಗಳಿಗೆ ಅವಳಿ ಮಕ್ಕಳ ತಾಯಿಯಾಗಿದ್ದ ನಟಿ ನಯನತಾರ ವಿರುದ್ದ ರಾಜ್ಯ ಸರಕಾರ ತನಿಖೆ ಆರಂಭಿಸಿದ ಬೆನ್ನಲ್ಲೇ ಇದೀಗ ನಯನತಾರಾ ಹಾಗೂ ವಿಘ್ನೇಶ್ ಶಿವನ್ ತಮ್ಮ ಮದುವೆ ಕುರಿತ ಗುಟ್ಟನ್ನು ರಟ್ಟು ಮಾಡಿದ್ದು, 6 ವರ್ಷಗಳ ಹಿಂದೆಯೇ ರಿಜಿಸ್ಟರ್ ಮದುವೆ ಆಗಿರುವುದಾಗಿ ಮಾಹಿತಿ ನೀಡಿದ್ದಾರೆ. ಈ ಸುದ್ದಿ ಕೇಳಿ ಅಭಿಮಾನಿಗಳಿಗೆ ಅಚ್ಚರಿ ಆಗಿದೆ.


    ಜೂನ್​ 9ರಂದು ನಯನತಾರಾ ಹಾಗೂ ವಿಘ್ನೇಶ್​ ಶಿವನ್​ ಅವರು ಹಸೆಮಣೆ ಏರಿದರು. ಆದರೆ ಅಚ್ಚರಿಯ ವಿಚಾರ ಏನೆಂದರೆ, 6 ವರ್ಷಗಳ ಹಿಂದೆ ಇವರಿಬ್ಬರು ರಿಜಿಸ್ಟರ್​ ಮ್ಯಾರೇಜ್​ ಆಗಿದ್ದರು. ಆದರೆ ಆ ವಿಚಾರವನ್ನು ಗುಟ್ಟಾಗಿ ಇಟ್ಟಿದ್ದರು. ಈಗ ಬಾಡಿಗೆ ತಾಯ್ತನಕ್ಕೆ ಸಂಬಂಧಿಸಿದ ವಿಚಾರಣೆ ವೇಳೆ ತಮಿಳುನಾಡು ಆರೋಗ್ಯ ಇಲಾಖೆಗೆ ಸಲ್ಲಿಸಿದ ಅಫಿಡೆವಿಟ್​ನಲ್ಲಿ ಈ ವಿಚಾರವನ್ನು ದಂಪತಿ ಬಾಯಿ ಬಿಟ್ಟಿದ್ದಾರೆ. ಮದುವೆ ನೋಂದಣಿ ಪತ್ರವನ್ನು ಸಾಕ್ಷಿಯಾಗಿ ನೀಡಿದ್ದಾರೆ.

    ‘ಕಾಂತಾರ’ ಕ್ಲೈಮ್ಯಾಕ್ಸ್ ಹಿಟ್ ಆಗಲು ಕಾರಣ ಈ ವ್ಯಕ್ತಿ..!!


    ಇನ್ನು, ತಮಗೆ ಮಗು ಹೆತ್ತುಕೊಟ್ಟ ಬಾಡಿಗೆ ತಾಯಿ ಯಾರು ಎಂಬುದನ್ನು ಕೂಡ ನಯನತಾರಾ ತಿಳಿಸಿದ್ದಾರೆ. ಅವರ ಹತ್ತಿರದ ಸಂಬಂಧಿಯೊಬ್ಬರು ಬಾಡಿಗೆ ತಾಯ್ತನದ ಮೂಲಕ ಮಗು ನೀಡಿದ್ದಾರೆ. ಆ ಮಹಿಳೆ ವಿದೇಶದಲ್ಲಿ ನೆಲೆಸಿದ್ದಾರೆ. ಹೊಸ ನಿಯಮದ ಪ್ರಕಾರ, ಬಾಡಿಗೆ ತಾಯ್ತನದ ಮೂಲಕ ಗರ್ಭ ಧರಿಸುವ ಮಹಿಳೆಯು ಹತ್ತಿರದ ಸಂಬಂಧಿ ಆಗಿರಬೇಕು. ಆಕೆಗೆ ಮದುವೆಯಾಗಿರಬೇಕು ಮತ್ತು ವಯಸ್ಸು 25ರಿಂದ 35 ವರ್ಷದ ಒಳಗಿರಬೇಕು. ಒಮ್ಮೆ ಮಾತ್ರ ಆಕೆ ಬಾಡಿಗೆ ತಾಯಿ ಆಗಬಹುದು. ಈ ಕೆಲಸಕ್ಕೆ ಹಣ ಪಡೆಯುವಂತಿಲ್ಲ ಎಂಬಿತ್ಯಾದಿ ನಿಮಯಗಳಿವೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *