Connect with us

LATEST NEWS

ನಕ್ಸಲ್ ಶರಣಾಗತಿಯಲ್ಲಿ ಸಂಶಯ – ನಕ್ಸಲ್ ಚಿಂತನೆಯ ಜನ ಸಾಮಾಜಿಕ ಜೀವನಕ್ಕೆ ಬಂದರೆ ಪ್ರಜಾಪ್ರಭುತ್ವ ವ್ಯವಸ್ಥೆಗೂ ಹಾನಿಯಾಗಲಿದೆ – ಅಣ್ಣಾಮಲೈ

ಮಂಗಳೂರು ಜನವರಿ 11: ಮುಖ್ಯಮಂತ್ರಿ ಎದುರು ನಕ್ಸಲ್ ಶರಣಾಗತಿಯ ಬಗ್ಗೆ ಸಂಶಯ ವಿದ್ದು, ಮುಖ್ಯಮಂತ್ರಿಗಳ ಮೇಲೆ ನಕ್ಸಲ್ ಬೆಂಬಲಿಗರ ಒತ್ತಡ ಇತ್ತು ಅನ್ನಿಸುತ್ತಿದೆ ಎಂದು ಮಾಜಿ ಐಪಿಎಸ್ ಅಧಿಕಾರಿ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಹೇಳಿದ್ದಾರೆ.


ಮಂಗಳೂರಿನಲ್ಲಿ ಮಾತನಾಡಿದ ಅವರು ನಕ್ಸಲ್ ಶರಣಾಗತಿ ಒಂದು ದೊಡ್ಡ ಪ್ರಕ್ರಿಯೆ ಈ ಹಿಂದೆ ಚಿಕ್ಕಮಗಳೂರಿನಲ್ಲಿ ನಕ್ಸಲ್ ಶರಣಾಗತಿ ಪ್ರಕ್ರಿಯೆ ಮಾಡಲಾಗಿದೆ. ಅಲ್ಲದೆ ರಾಜ್ಯದಲ್ಲಿ ನಕ್ಸಲ್ ಶರಣಾಗತಿ ಪಾಲಿಸಿ ಕೂಡಾ ಇದ್ದು, ನಕ್ಸಲ್ ಶರಣಾಗತಿಯ ಮೊದಲು ಹಲವು ಚರ್ಚೆಗಳನ್ನು ನಡೆಸಬೇಕಿದೆ, ಅವರು ಜೀವನದಲ್ಲಿ ಏನು ಆಗಬೇಕು ಎನ್ನೋದನ್ನು ನಿರ್ಧರಿಸಿಯೇ ಬರುತ್ತಾರೆ, ಅವರಿಗೆ ತರಭೇತಿ, ಬ್ಯಾಂಕ್ ಸಾಲ ಸೌಲಭ್ಯಗಳ ವ್ಯವಸ್ಥೆ ಈ ಎಲ್ಲಾ ವಿಚಾರಗಳು ಚರ್ಚೆಯಾಗಬೇಕಿದೆ. ಆ ನಂತರ ನಕ್ಸಲ್ ಶರಣಾಗತಿ ಅಗುತ್ತಾರೆ. ಆ ನಂತರ ಅವರ ಮೇಲಿದ್ದ ಕೇಸುಗಳನ್ನು ಎದುರಿಸಬೇಕು. ನ್ಯಾಯಾಲಯದ ಮುಂದೆ ಹಾಜರಾಗಬೇಕು ಎನ್ನುವ ಷರತ್ತುಗಳೂ ಇವೆ.

ಆದರೆ ಮುಖ್ಯಂತ್ರಿಗಳ ಮುಂದೆ ನಡೆದ ನಕ್ಸಲ್ ಶರಣಾಗತಿ ಪ್ರಕ್ರಿಯೆಯ ಮೇಲೆ ಸಂಶಯ ಮೂಡುತ್ತದೆ. ಶರಣಾದ ನಕ್ಸಲರು ಪೋಲೀಸರಿಗೆ ಹಲವು ವರ್ಷಗಳಿಂದ ಬೇಕಾದವರಾಗಿದ್ದಾರೆ. ಅಲ್ಲದೆ ಇತ್ತೀಚೆಗೆ ನಡೆದ ನಕ್ಸಲ್ ವಿಕ್ರಂ ಗೌಡನ ಎನ್ಕೌಂಟರ್ ಕೂಡಾ ಸಂಶಯಕ್ಕೆ ಕಾರಣವಾಗಿದೆ. ವಿಕ್ರಂ ಗೌಡ ಒಂದು ಮನೆಗೆ ಬಂದಿದ್ದರು, ಆ ಮನೆಯವರು ಮಾದ್ಯಮಗಳಿಗೆ ಮಾಹಿತಿಯನ್ನೂ ನೀಡಿದ್ದರು. ಆ ಬಳಿಕ ತಕ್ಷಣ ಎನ್ಕೌಂಟರ್ ಸುದ್ಧಿಯಾಗುತ್ತದೆ. ಎನ್ಕೌಂಟರ್ ಆದ ತಕ್ಷಣ ಶರಣಾಗತಿಯ ಬಗ್ಗೆ ಸರಕಾರ ಹೇಳುತ್ತದೆ.

ಒಬ್ಬ ಪೋಲೀಸ್ ಅಧಿಕಾರಿಯಾಗಿ ಈ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಅನುಭವದಲ್ಲಿ ಹೇಳುತ್ತೇನೆ, ನಕ್ಸಲ್ ಶರಣಾಗತಿ ಈ ಪ್ರಕ್ರಿಯೆಯಲ್ಲಿ ಸಂಶಯವಿದೆ ಎಂದಿದ್ದಾರೆ. ಅಲ್ಲದೆ ನಕ್ಸಲ್ ಶರಣಾಗತಿ ವಿಚಾರದಲ್ಲಿ ನಕ್ಸಲ್ ಬೆಂಬಲಿಗರ ಒತ್ತಡ ಮುಖ್ಯಮಂತ್ರಿಗಳ ಮೇಲಿದೆ ಅನ್ನಿಸುತ್ತದೆ . ನಕ್ಸಲ್ ಶರಣಾಗತಿ ಜಿಲ್ಲಾದಿಕಾರಿಗಳ ಕಛೇರಿಯಲ್ಲಿ ಪೋಲೀಸ್ ಅಧಿಕಾರಿಗಳ ಉಸ್ತುವಾರಿಯಲ್ಲಿ ನಡೆಯಬೇಕಿದೆ, ಆದರೆ ಇಲ್ಲಿ ಸರಕಾರ ಪೊಲಿಟಿಕಲ್ ಮೈಲೇಜ್ ಪಡೆಯಲು ಈ ವಿಚಾರವನ್ನು ಬಳಸಿಕೊಂಡಿದೆ ,ಶರಣಾಗತಿ ಪ್ರಕ್ರಿಯೆ ಸರಿಯಾಗಿ ನಡೆಸದ ಕಾರಣ ಮುಂದೆ ನಕ್ಸಲ್ ಚಿಂತನೆಯ ಜನ ಸಾಮಾಜಿಕ ಜೀವನಕ್ಕೆ ಬಂದರೆ ಪ್ರಜಾಪ್ರಭುತ್ವ ವ್ಯವಸ್ಥೆಗೂ ಹಾನಿಯಾಗಲಿದೆ ಎಂದು ಅಣ್ಣಾಮಲೈ  ಎಚ್ಚರಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *