LATEST NEWS
ತೀವ್ರಗೊಂಡ ಕೂಂಬಿಂಗ್ ಕಾರ್ಯಾಚರಣೆ ಹಾಸನಕ್ಕೆ ಪಲಾಯನಗೈದ ನಕ್ಸಲರು ?
ತೀವ್ರಗೊಂಡ ಕೂಂಬಿಂಗ್ ಕಾರ್ಯಾಚರಣೆ ಹಾಸನಕ್ಕೆ ಪಲಾಯನಗೈದ ನಕ್ಸಲರು ?
ಮಂಗಳೂರು ಜೂನ್ 18: ದಕ್ಷಿಣಕನ್ನಡ ಜಿಲ್ಲೆಯ ಪೊಲೀಸರು ಮತ್ತು ನಕ್ಸಲ್ ನಿಗ್ರಹ ಪಡೆಯ ತೀವ್ರ ಕಾರ್ಯಾಚರಣೆಯ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಸಮೀಪ ಕಣಿಸಿಕೊಂಡಿದ್ದ ಶಂಕಿತ ನಕ್ಸಲರು ಹಾಸನದ ಕಡೆ ಪರಾರಿಯಾಗಿದ್ದಾರೆ ಎಂಬ ಶಂಕೆ ವ್ಯಕ್ತಪಡಿಸಲಾಗುತ್ತಿದೆ.
ಈ ನಡುವೆ ಸುಳ್ಯ ಮಡಪ್ಪಾಡಿಯ ಕಡಮಕಲ್ಲು ಎಂಬಲ್ಲಿ ಕಾಣಿಸಿಕೊಂಡಿದ್ದ ಶಂಕಿತ ನಕ್ಸಲರು ಸುಬ್ರಹ್ಮಣ್ಯ ,ಬಿಸಲೆ ಘಾಟ್ ಮಾರ್ಗವಾಗಿ ಹಾಸನದ ಕಡೆ ಸಂಚರಿಸಿರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾಪೊಲೀಸರು ಮತ್ತು ನಕ್ಸಲ್ ನಿಗ್ರಹ ಪಡೆಯ ಜಂಟಿ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿದ ಹಿನ್ನಲೆಯಲ್ಲಿ ನಕ್ಸಲರು ಹಾಸನಕ್ಕೆ ಪಲಾಯನ ಮಾಡಿದ್ದಾರೆ ಎಂದು ಹೇಳಲಾಗಿದೆ.
ಹಾಸನದ ಕಡೆಗೆ ಶಂಕಿತ ನಕ್ಸಲರು ನುಸುಳಿರುವ ಶಂಕೆಯ ಹಿನ್ನೆಲೆಯಲ್ಲಿ ಹಾಸನ – ದಕ್ಷಿನ ಕನ್ನಡ ಜಿಲ್ಲೆಯ ಗಡಿಭಾಗದಲ್ಲಿ ಪೊಲೀಸರು ಹಾಗು ನಕ್ಸಲ್ ನಿಗ್ರಹ ಪಡೆಯ ಯೋಧರು ಕಾರ್ಯಾಚರಣೆ ಆರಂಭಿಸಿದ್ದಾರೆ. ಈ ನಡುವೆ ಕೂಂಬಿಂಗ್ ಗೆ ತೆರಳಿದ್ದ ಸಂದರ್ಭದಲ್ಲಿ ಮೃತಪಟ್ಟ ಯೋಧ ರಂಗಸ್ವಾಮಿ ಅವರ ಅಂತ್ಯ ಸಂಸ್ಕಾರ ಸರಕಾರಿ ಗೌರವಗಳೊಂದಿಗೆ ಹುಟ್ಟೂರು ಭದ್ರಾವತಿಯ ನ್ಯೂಟೌನ್ ನ ಗಣೇಶ ಕಾಲೊನಿಯಲ್ಲಿ ನಿನ್ನೆ ನಡೆಸಲಾಗಿದೆ.