Connect with us

LATEST NEWS

ಅಥ್ಲೆಟಿಕ್ಸ್ ಅಸೋಶಿಯೇಶನ್ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ, ಅವಕಾಶ ವಂಚಿತೆಯಾದ ಟ್ರಿಪಲ್ ಜಂಪ್ ಕ್ರೀಡಾಪಟು

ಅಥ್ಲೆಟಿಕ್ಸ್ ಅಸೋಶಿಯೇಶನ್ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ, ಅವಕಾಶ ವಂಚಿತೆಯಾದ ಟ್ರಿಪಲ್ ಜಂಪ್ ಕ್ರೀಡಾಪಟು

ಮಂಗಳೂರು, ಜೂನ್ 21: ಜೂನ್ 26 ರಿಂದ 29 ರ ವರೆಗೆ ಗುವಾಹಟಿಯಲ್ಲಿ ನಡೆಯಲಿರುವ 58 ನೇ ರಾಷ್ಟ್ರೀಯ ಅಂತರರಾಜ್ಯ ಸೀನಿಯರ್ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಿಂದ ಪ್ರತಿಭಾನ್ವಿತ ಕ್ರಿಡಾಪಟುವೊಬ್ಬರಿಗೆ ಅವಕಾಶ ತಪ್ಪಿದೆ.

ಮಂಗಳೂರಿನ ಟ್ರಿಪಲ್ ಜಂಪ್ ಪಟು ಜೊಯಿಲೀನ್ .ಎಂ.ಲೋಬೋ ರಾಷ್ಟ್ರ ಮಟ್ಟದ ಕ್ರಿಡಾಪಟುವಾಗಿದ್ದು, ಗುವಾಹಟಿಯಲ್ಲಿ ನಡೆಯಲಿರುವ ಈ ಚಾಂಪಿಯನ್ ಶಿಪ್ ಗೆ ಈಗಾಗಲೇ ಸರ್ವ ಸಿದ್ಧತೆಯನ್ನು ನಡೆಸಿದ್ದಾರೆ.

ಆದರೆ ಗುವಾಹಟಿಯಲ್ಲಿ ಭಾಗವಹಿಸುವ ತಂಡವನ್ನು ಕರ್ನಾಟಕ ಅಥ್ಲೆಟಿಕ್ಸ್ ಅಸೋಶಿಯೇಶನ್ ಅಧಿಕಾರಿಗಳು ಈಗಾಗಲೇ ಸಿದ್ಧಪಡಿಸಿದ್ದಾರೆ.

ಈ ತಂಡದಲ್ಲಿ ಜೊಯಿಲೀನ್ ಹೆಸರನ್ನು ಕೈ ಬಿಡಲಾಗಿದೆ.

ಕರ್ನಾಟಕ ಅಥ್ಲೆಟಿಕ್ಸ್ ಅಸೋಶಿಯೇಶನ್ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಇದೀಗ ಪ್ರತಿಭಾನ್ವಿತ ಕ್ರೀಟಾಪಟುವೊಬ್ಬರು ಅವಕಾಶ ವಂಚಿತರಾಗಿದ್ದಾರೆ.

ಗುವಾಹಟಿಯಲ್ಲಿ ನಡೆಯಲಿರುವ ಈ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿದ ಕ್ರೀಡಾಪಟುಗಳನ್ನು ಏಷ್ಯನ್ ಗೇಮ್ಸ್ ಗೆ ಅರ್ಹತೆ ಪಡೆಯುತ್ತಾರೆ.

ಜೊಯಿಲೀನ್ ಗುಹವಾಟಿಯಲ್ಲಿ ನಡೆಯುವ ಕ್ರೀಡಾಕೂಟಕ್ಕಾಗಿ ಭರ್ಜರಿ ತಯಾರಿಯನ್ನೂ ನಡೆಸಿದ್ದರು.

ಆದರೆ ಇದೀಗ ತನ್ನ ಹೆಸರನ್ನೇ ಕೈ ಬಿಟ್ಟ ಹಿನ್ನಲೆಯಲ್ಲಿ ಈ ಕ್ರೀಡಾಪಟು ಇದೀಗ ತಂಡಕ್ಕೆ ಸೇರ್ಪಡೆಯಾಗುವುದಕ್ಕಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಈ ನಡುವೆ ಜೊಯಿಲೀನ್ ಹೆಸರನ್ನು ತಂಡದಲ್ಲಿ ಸೇರಿಸಬೇಕೆಂದು ಆಗ್ರಹಿಸಿ ಟ್ವೀಟ್ ಅಭಿಯಾನವೂ ಆರಂಭವಾಗಿದೆ.

ಈ ಹಿನ್ನಲೆಯಲ್ಲಿ ಕರ್ನಾಟಕ ಅಥ್ಲೆಟಿಕ್ಸ್ ಅಸೋಶಿಯೇಶನ್ ಅಧಿಕಾರಿಯೊಬ್ಬರು ಜೊಯಿಲೀನ್ ಗೆ ಅವಕಾಶ ನೀಡಲು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗುವುದು ಎನ್ನುವ ಆಶ್ವಾಸನೆಯನ್ನು ಟ್ವೀಟ್ ಮೂಲಕವೇ ನೀಡಿದ್ದಾರೆ.

ಆದರೆ ಈ ಕ್ರೀಡಾಪಟುವಿಗೆ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *