LATEST NEWS
ಬಿಜೆಪಿಯ ಡ್ರಾಮ ಕಂಪೆನಿಯಲ್ಲಿ ಮೋದಿ ಮಾಲಕ, ಷಾ ಮ್ಯಾನೇಜರ್ : ರಾಮಲಿಂಗಾ ರೆಡ್ಡಿ
ಬಿಜೆಪಿಯ ಡ್ರಾಮ ಕಂಪೆನಿಯಲ್ಲಿ ಮೋದಿ ಮಾಲಕ, ಷಾ ಮ್ಯಾನೇಜರ್ : ರಾಮಲಿಂಗಾ ರೆಡ್ಡಿ
ಮಂಗಳೂರು,ಜನವರಿ 12 : ಬಿಜೆಪಿಯ ಡ್ರಾಮ ಕಂಪೆನಿಯಲ್ಲಿ ಮೋದಿ ಮಾಲಕ, ಷಾ ಮ್ಯಾನೇಜರ್ ಆಗಿದ್ದಾರೆ ಎಂದು ರಾಜ್ಯ ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರು ವ್ಯಂಗ್ಯವಾಡಿದ್ದಾರೆ.
ಮಂಗಳೂರಿನ ಶಕ್ತಿನಗರದಲ್ಲಿ ಪೊಲೀಸ್ ವಸತಿಗೃಹಕ್ಕೆ ಶಿಲಾನ್ಯಾಸಗೈದು ಅವರು ಮಾತನಾಢಿದರು.
ಮಹಾದಾಯಿ ವಿಚಾರದಲ್ಲಿ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ ಗೃಹ ಸಚಿವರು ಬಿಜೆಪಿಯೊಂದು ಡ್ರಾಮಾ ಕಂಪೆನಿ ಇದ್ದ ಹಾಗೆ.
ನರೇಂದ್ರ ಮೋದಿ ಕಂಪನಿಯ ಮಾಲಕರಾಗಿದ್ದರೆ, ಅಮಿತ್ ಶಾ ಅದರ ಮ್ಯಾನೇಜರ್ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ವ್ಯಂಗ್ಯ ವಾಡಿದರು.
ಮನೋಹರ್ ಪರಿಕ್ಕರ್, ಯಡಿಯೂರಪ್ಪ ಈ ಕಂಪೆನಿಯ ಪಾತ್ರಧಾರಿಗಳು ಎಂದು ಹೇಳಿದ ಅವರು ಇವರ ನಾಟಕದಿಂದ ರೈತರಿಗೆ ತೊಂದರೆಯಾಗುತ್ತಿದೆ ಆದರೆ, ಕಾಂಗ್ರೆಸ್ ಏನಿದ್ದರೂ ರೈತರ ಪರವಾಗಿದೆ ಮತ್ತು ರೈತರ ಪರವಾಗೇ ಇರುತ್ತೆ ಎಂದು ತಿಳಿಸಿದರು.
ಕರಾವಳಿಯಲ್ಲಿ ಕೋಮು ವೈಷಷಮ್ಯದ ಗಲಾಟೆಗೆ ಬಲಪಂಥೀಯರು, ಪಿಎಫ್ಐನವರ ಓವರ್ ಆಕ್ಟಿಂಗ್ ಕಾರಣ :
ಕರಾವಳಿಯಲ್ಲಿ ಕೋಮು ವೈಷಮ್ಯದ ಗಲಾಟೆಗೆ ಕಾರಣ ಸಂಘಟನೆಗಳು ಹಾಗೂ ರಾಜಕೀಯ ನಾಯಕರ ಕುಮ್ಮಕ್ಕು.
ಇದಕ್ಕೆಲ್ಲ ಬಲಪಂಥೀಯರು, ಪಿಎಫ್ಐನವರ ಓವರ್ ಆಕ್ಟಿಂಗ್ ಕಾರಣವಾಗಿದ್ದು, ಇವರು ಸ್ವಲ್ವ ಸುಮ್ಮನಿದ್ದರೆ ಎಲ್ಲವೂ ಸರಿಯಾಗುತ್ತೆ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.
ಸಂಘಟನೆಗಳ ಹಾಗೂ ರಾಜಕೀಯ ನಾಯಕರ ಕುಮ್ಮಕ್ಕಿನಿಂದ ಕರಾವಳಿಯಲ್ಲಿ ಗಲಾಟೆಗಳು ಸಂಭವಿಸುತ್ತಿವೆ. ಜನರಿಗೆ ಈ ಗಲಾಟೆಗಳು ಯಾವುದೂ ಬೇಕಾಗಿಲ್ಲ.
ಸಂಘಟನೆಗಳ ನಿಷೇಧಕ್ಕೆ ಸಂಬಂಧಿಸಿದಂತೆ ತಕ್ಷಣಕ್ಕೆ ಯಾವ ಪ್ರಸ್ತಾಪ ಇಲ್ಲ. ನಿಷೇಧಿಸುವುದಾದರೆ ಎರಡೂ ಕಡೆಯ ಸಂಘಟನೆಗಳನ್ನು ನಿಷೇಧ ಮಾಡಬೇಕು.
ಪ್ರಸ್ತುತ ಮುಖ್ಯಮಂತ್ರಿ ಪ್ರವಾಸದಲ್ಲಿದ್ದಾರೆ, ಪ್ರವಾಸದಿಂದ ಹಿಂದಿರುಗಿದ ಬಳಿಕ ಈ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದರು.
ಮೂಡಿಗೆರೆಯಲ್ಲಿ ಧನ್ಯಶ್ರೀ ಪ್ರಾಣ ಹೋಗಿದ್ದಕ್ಕೆ ಬೆಲೆ ಇಲ್ಲವೇ ಎಂದ ಗೃಹ ಸಚಿವರು ಇವರು ಯಾಕೆ ಅಲ್ಲಿ ಹೋಗಿ ಖಂಡಿಸುತ್ತಿಲ್ಲ , ದ್ವಂದ್ವ ನೀತಿ ಯಾಕೆ ? ಎಂದು ಪ್ರಶ್ನಿಸಿದರು.
ಆ ಗಲಾಟೆಯಲ್ಲಿರೋದು ಎಲ್ಲರೂ ಯುವಮೋರ್ಚಾದವರು.
ಪೊಲೀಸರು ಎಲ್ಲ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ ಎಂದ ಅವರು ಇಂತಹ ಸಂಘಟನೆಗಳಿಗೆ ಜನರೇ ರೊಚ್ಚಿಗೆದ್ದು ಉತ್ತರ ನೀಡಲಿದ್ದಾರೆ ಎಂದು ಹೇಳಿದರು.