Connect with us

DAKSHINA KANNADA

ಬಿಲ್ಲವ ಸಮುದಾಯದ ಅಭ್ಯರ್ಥಿಗಳಿಗೆ ನಾರಾಯಣ‌ಗುರು ವಿಚಾರ ವೇದಿಕೆಯಿಂದ ಪಕ್ಷತೀತ ಬೆಂಬಲ- ಸತ್ಯಜೀತ್ ಸುರತ್ಕಲ್

ಮಂಗಳೂರು: ಲೋಕ‌ಸಭಾ ಚುನಾವಣೆಯಲ್ಲಿ ಬಿಲ್ಲವ ಸಮುದಾಯದ ಎಲ್ಲಾ ಅಭ್ಯರ್ಥಿಗಳನ್ನು ನಾರಾಯಣ‌ಗುರು ವಿಚಾರ ವೇದಿಕೆ ಪಕ್ಷತೀತವಾಗಿ ಬೆಂಬಲಿಸಲಿದೆ ಎಂದು ವಿಚಾರ ವೇದಿಕೆ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಅವರು ತಿಳಿಸಿದ್ದಾರೆ.


ಮಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸತ್ಯಜೀತ್ ಅವರು ದಕ್ಷಿಣ ಕನ್ನಡದಲ್ಲಿ ಪದ್ಮರಾಜ್, ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಕೋಟ‌ ಶ್ರೀನಿವಾಸ ಪೂಜಾರಿ ಮತ್ತು ಶಿವಮೊಗ್ಗ ಕ್ಷೇತ್ರದಲ್ಲಿ ಗೀತಾ ಶಿವರಾಜ್ ಕುಮಾರ್ ಚುನಾವಣಾ ಕಣದಲ್ಲಿದ್ದು ವೇದಿಕೆ ಅವರನ್ನು ಬೆಂಬಲಿಸಲಿದೆ ಎಂದರು. ವೇದಿಕೆ ಯಾವುದೇ ಪಕ್ಷವನ್ನು ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ ಸತ್ಯಜೀತ್ ಅವರು ಬದಲು‌ ಸಮುದಾಯದ ಅಭ್ಯರ್ಥಿಗಳನ್ನು ಬೆಂಬಲಿಸುವ ಮೂಲಕ ಸಮುದಾಯದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಪ್ರಗತಿಗೆ ಶ್ರಮಿಸುವವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಬಹಳ ವರ್ಷಗಳ ನಂತರ ಮೂರು ಸ್ಥಾನ ಗಳಲ್ಲಿ ನಾರಾಯಣ ಗುರು ಸಮಾಜಕ್ಕೆ ಅವಕಾಶ ಸಿಕ್ಕಿದೆ. ಬಿಜೆಪಿ ಯಲ್ಲಿ 33ವರ್ಷಗಳ ಬಳಿಕ ಬಿಲ್ಲವ ಅಭ್ಯರ್ಥಿಗೆ ಅವಕಾಶ ಸಿಕ್ಕಿದೆ.ದಕ್ಷಿಣ ಕನ್ನಡ ಕಾಂಗ್ರೆಸ್ ನಲ್ಲಿ ಜನಾರ್ಧನ ಪೂಜಾರಿಯ ಬಳಿಕ ಈಗ ಪದ್ಮರಾಜ್ ಗೆ ಅವಕಾಶ ಸಿಕ್ಕಿದೆ.ಪದ್ಮರಾಜ್, ಗೀತಾ ಶಿವರಾಜಕುಮಾರ್,ಕೋಟ ಶ್ರೀನಿವಾಸ ಪೂಜಾರಿ ಪರ ಪ್ರಚಾರ ಮಾಡುತ್ತೇವೆ.ರಾಜಕೀಯ ಪಕ್ಷವನ್ನ ಪಕ್ಕಕಿಟ್ಟು ಬಿಲ್ಲವ ಸಮಾಜ ಎಂದು ದುಡಿಯುತ್ತೇವೆ. ಯಾರು ಏನು ಬೇಕಾದರೂ ಹೇಳಬಹುದು, ಸಾಮಾಜಿಕ ಜಾಲತಾಣಗಳಲ್ಲಿ ಬರೀಬಹುದು,ನನ್ನ ಕಷ್ಟದ ದಿನಗಳಲ್ಲಿ ಯಾರು ನಿಂತುಕೊಂಡಿದ್ರು ಅವರ ಮಾತನ್ನ ಮಾತ್ರ ಕೇಳುತ್ತೇನೆ ಎಂದು ಸ್ಪಷ್ಟಪಡಿಸಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *