Connect with us

DAKSHINA KANNADA

ಮಂಗಳೂರು : ಅಯೋಧ್ಯೆ ಕರಸೇವೆಯ ಶ್ರೀರಾಮ ಭಕ್ತರನ್ನು ಸನ್ಮಾನಿಸಿದ ನಮೋ ಬ್ರಿಗೇಡ್..!

ಮಂಗಳೂರು : ನಮೋ ಬ್ರಿಗೇಡ್ ಇದರ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯಿಂದ ಅಯೋಧ್ಯೆಗೆ ಕರಸೇವೆಯಲ್ಲಿ ಭಾಗವಹಿಸಿದ ಶ್ರೀರಾಮ ಭಕ್ತರನ್ನು ಸನ್ಮಾನಿಸಲಾಯಿತು.

ವಿ.ಟಿ.ರಸ್ತೆಯಲ್ಲಿರುವ ಶ್ರೀ ವಿಠೋಭ ರುಕುಮಾಯಿ ದೇವಸ್ಥಾನದ ರಾಜಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ 63 ಕರಸೇವಕರನ್ನು ಸನ್ಮಾನಿಸಿ ಅವರ ಸೇವೆಗೆ ಅಭಿನಂದನೆ ಸಲ್ಲಿಸಲಾಯಿತು. ಆರಂಭದಲ್ಲಿ 1992 ರ ಕರಸೇವೆಯ ದಿನಗಳನ್ನು ನೆನಪಿಸುವ ವಿಡಿಯೋ ಡಾಕ್ಯುಮೆಂಟರಿಯನ್ನು ಎಲ್ ಇಡಿ ಪರದೆಯಲ್ಲಿ ಪ್ರದರ್ಶಿಸಲಾಯಿತು. ಆ ಬಳಿಕ ನಮೋ ಬ್ರಿಗೇಡ್ ರಾಜ್ಯ ಮಾರ್ಗದರ್ಶಕರಾದ ಚಕ್ರವರ್ತಿ ಸೂಲಿಬೆಲೆಯವರು ಕರಸೇವಕರ ಹೋರಾಟಗಳ ಘಟನಾವಳಿಗಳು, ತ್ಯಾಗ, ಬಲಿದಾನಗಳ ಕುರಿತು ಮಾತನಾಡಿದ ವಿಡಿಯೋ ಪ್ರದರ್ಶಿಸಲಾಯಿತು.

ಸನ್ಮಾನ ಸ್ವೀಕರಿಸಿದ ಕರಸೇವಕರು ಮೆಚ್ಚುಗೆಯನ್ನು ಸೂಚಿಸಿದರು. ವಿಶ್ವ ಹಿಂದೂ ಪರಿಷತ್ ಮುಖಂಡರಾದ ಎಂ.ಬಿ.ಪುರಾಣಿಕ್, ಹಿರಿಯ ಲೇಖಕ ಡಾ| ಪಿ ಅನಂತಕೃಷ್ಣ ಭಟ್, ವಿಹಿಂಪ ಮುಖಂಡರಾದ ಶರಣ್ ಪಂಪ್ ವೆಲ್, ಶಿವಾನಂದ ಮೆಂಡನ್, ಮಟ್ಟಾರು ವಿಠಲ್ ಕಿಣಿ ಸಹಿತ ಅನೇಕ ಗಣ್ಯರು ಭಾಗವಹಿಸಿದರು. ನಮೋ ಬ್ರಿಗೇಡ್ ಪ್ರಮುಖರಾದ ಮಂಗಲ್ಪಾಡಿ ನರೇಶ್ ಶೆಣೈ, ತಿಲಕ್ ಶಿಶಿಲ, ಭರತ್ ನಾಗರಮಠ್, ರಾಜೇಂದ್ರ ಉಳ್ಳಾಲ್, ನರೇಶ್ ಪ್ರಭು, ಸಿರ್ಧಾರ್ಥ್ ಪ್ರಭು, ನಾಗೇಂದ್ರ ಶೆಣೈ ಸಹಿತ ನಮೋ ಬ್ರಿಗೇಡ್ ಪ್ರಮುಖರು ಉಪಸ್ಥಿತರಿದ್ದರು. ಗೋಪಾಲಕೃಷ್ಣ ಭಟ್ ನಿರೂಪಿಸಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *