DAKSHINA KANNADA
ನಮೋ ಅಭಿಮಾನಿ ಬಳಗದಿಂದ ಹುಲಿ ಕುಣಿತ ಹಾಗೂ ಸಾಮೂಹಿಕ ವಾಹನ ಪೂಜೆ
ಪುತ್ತೂರು ಅಕ್ಟೋಬರ್ 12: ನಮೋ ಅಭಿಮಾನಿ ಬಳಗ ಪುತ್ತೂರು ವತಿಯಿಂದ ವಿಜಯ ದಶಮಿಯ ದಿನಯಂದು ಪುತ್ತೂರು ನಗರ ಕೇಂದ್ರ ಭಾಗದ ಕಿಲ್ಲೆ ಮೈದಾನದಲ್ಲಿ ಆಯೋಜಿಸಲಾದ ಹುಲಿ ಕುಣಿತ ಹಾಗೂ ಸಾಮೂಹಿಕ ವಾಹನ ಪೂಜೆ ಕಾರ್ಯಕ್ರಮವು ವಿಶೇಷವಾಗಿ ಗಮನಸೆಳೆಯಿತು.
ಕಾರ್ಯಕ್ರಮವನ್ನು ಬಿಜೆಪಿ ಹಾಗೂ ಸಂಘ ಪರಿವಾರದ ಹಿರಿಯರಾದ ಯು. ಪೂವಪ್ಪ, ಮುಗೆರೋಡಿ ಬಾಲಕೃಷ್ಣ ರೈ, ಡಾ. ಎಂ.ಕೆ. ಪ್ರಸಾದ್ ಮೊದಲಾದವರು ದೀಪ ಬೆಳಗಿಸಿ ಉದ್ಘಾಟಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದ ಬಿಜೆಪಿ ನಾಯಕ ಮುರಳೀಕೃಷ್ಣ ಹಸಂತಡ್ಕ, ಹಬ್ಬಗಳ ಸೀಸನ್‌ನಲ್ಲಿ ನಾವಿದ್ದೇವೆ. ನವರಾತ್ರಿ, ವಿಜಯದಶಮಿಯ ಆಚರಣೆಯು ಹಿಂದೂ ಸಮಾಜವನ್ನು ಮತ್ತಷ್ಟು ಜಾಗೃತಗೊಳಿಸುತ್ತದೆ. ಜಾಗೃತ ಹಿಂದೂ ಸಮಾಜ ದುಷ್ಟ ಶಕ್ತಿಗಳ ವಿರುದ್ಧ ಹೋರಾಟಕ್ಕೆ ಎಂದೂ ಸಿದ್ಧವಾಗಿರುತ್ತದೆ ಎಂದರು.
ಈ ಸಂದರ್ಭದಲ್ಲಿ 200 ಕ್ಕೂ ಹೆಚ್ಚು ವಾಹನಗಳಿಗೆ ಪೂಜೆ ನೆರವೇರಿಸಲಾಯಿತು. ಕಿಲ್ಲೆ ಮೈದಾನದ ವಿಸ್ತಾರವಾದ ಜಾಗದಲ್ಲಿ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳಿಗೆ ಪುರೋಹಿತರಿಂದ ಮಂತ್ರ ಮುಖೇನ ವಾಹನ ಪೂಜೆ ನೆರವೇರಿಸಲಾಯಿತು.ಪಿಲಿ ರಾಧಣ್ಣ ಮತ್ತು ಬಳಗದ ಶಾರದಾ ಹುಲಿಗಳ ಕಿಣಿತ ನೂರಾರು ಮಂದಿಯ ಮನರಂಜಿಸಿತು. ಸುಮಾರು 1 ಗಂಟೆಗಳ ಕಾಲ ಕಿಲ್ಲೆಯ ತೆರೆದ ಮೈದಾನದಲ್ಲಿ ಹುಲಿಗಳ ಕುಣಿತ ನಡೆಯಿತು. ಆರಂಭದಲ್ಲಿ ಮಕ್ಕಳ ತಂಡದಿAದ ಕುಣಿತ ಭಜನೆಯೂ ವಿಶೇಷವಾಗಿ ನಡೆಯಿತು.