DAKSHINA KANNADA
ಸನಾತನ ಧರ್ಮದ ವಿರುದ್ದ ಹೇಳಿಕೆಯ ಬಗ್ಗೆ I.N.D.I.A ಮೈತ್ರಿಕೂಟದ ನಾಯಕರು ಯಾಕೆ ಮೌನ – ನಳಿನ್ ಕುಮಾರ್ ಕಟೀಲ್

ಪುತ್ತೂರು ಸೆಪ್ಟೆಂಬರ್ 11: ರಾಜ್ಯ ಕಾಂಗ್ರೇಸ್ ಸರಕಾರದ ಭ್ರಷ್ಟಾಚಾರ, ರೈತ ವಿರೋಧಿ ನೀತಿಯ ವಿರುದ್ದ ಬಿಜೆಪಿ ರಾಜ್ಯಾದ್ಯಂತ ಹೋರಾಟ ನಡೆಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಎಚ್ಚರಿಕೆ ನೀಡಿದ್ದಾರೆ.
ಪುತ್ತೂರಿನಲ್ಲಿ ಮಾತನಾಡಿದ ಅವರು ಸನಾತನ ಧರ್ಮ ಭಾರತದ ಆತ್ಮವಿದ್ದಂತೆ, ಭಾರತ ಸನಾತನ ಹಿಂದೂ ಸಂಸ್ಕೃತಿಯನ್ನು ಅನುಸರಿಸುತ್ತಿದೆ. ರಾಜಕೀಯ ಲಾಭಕ್ಕೋಸ್ಕರ ಕೆಲವರು ಹಿಂದೂ ಧರ್ಮ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುತ್ತಿದ್ದಾರೆ. ಉದಯನಿಧಿ ಸ್ಟಾಲಿನ್ ಮತ್ತು ಎ.ರಾಜ ಅವರ ಹೇಳಿಕೆಗಳನ್ನು ನಾನು ಖಂಡಿಸುತ್ತೇನೆ. ಅಲ್ಲದೆ ಸ್ಟಾಲಿನ್ ಮತ್ತು ಎ.ರಾಜ ಹೇಳಿಕೆಯ ಬಗ್ಗೆ I.N.D.I.A ಮೈತ್ರಿಕೂಟದ ನಾಯಕರು ಯಾಕೆ ಮೌನವಾಗಿದ್ದಾರೆ. ಅಲ್ಲದೆ ಸನಾತದ ಧರ್ಮದ ವಿರುದ್ಧದ ಹೇಳಿಕೆಗೆ ನಿಮ್ಮ ನಿಲುವೇನು ಕಾಂಗ್ರೇಸ್ ಮುಖಂಡರನ್ನು ನಳಿನ್ ಕುಮಾರ್ ಕಟೀಲ್ ಪ್ರಶ್ನಿಸಿದ್ದಾರೆ.

ಲೋಕಸಭಾ ಚುನಾವಣೆಗೆ ಪಕ್ಷ ಈಗಾಗಲೇ ಸಿದ್ಧತೆ ಆರಂಭಗೊಳಿಸಿದೆ. ಕಳೆದ ವಿಧಾನಸಭಾ ಚುನಾವಣೆ ನಡೆದ ಬಳಿಕ ಎಲ್ಲಾ ಮತಗಟ್ಟೆಗಳ ಪರಿಶೀಲನೆ ಮಾಡಲು ಆರಂಭಿಸಲಾಗಿದ್ದು, ಪ್ರತೀ ಮತಗಟ್ಟೆಗಳ ಕಾರ್ಯಕರ್ತರ ಭೇಟಿ ಮಾಡಲಾಗಿದ್ದು, ಜಿಲ್ಲಾ ಮಟ್ಟದ ಕಾರ್ಯಕರ್ತರ ಸಮಾವೇಶಕ್ಕೆ ಸಿದ್ಧತೆ ಮಾಡಲಗುತ್ತಿದೆ ಎಂದರು.