Connect with us

LATEST NEWS

ಮಂಗಳೂರಿಗೆ ಸ್ವಾಗತ ಕೋರುವ “ನಳಿನ್ ಕುಮಾರ್ ಕಟೀಲ್ ಸ್ಮಾರಕ ಪಂಪ್ ವೆಲ್ ಪ್ಲೈ ಓವರ್ “

ಮಂಗಳೂರಿಗೆ ಸ್ವಾಗತ ಕೋರುವ “ನಳಿನ್ ಕುಮಾರ್ ಕಟೀಲ್ ಸ್ಮಾರಕ ಪಂಪ್ ವೆಲ್ ಪ್ಲೈ ಓವರ್ “

ಮಂಗಳೂರು ನವೆಂಬರ್ 8: ಮಂಗಳೂರಿಗೆ ಆಗಮಿಸುವವರನ್ನು ನಳಿನ್ ಕುಮಾರ್ ಕಟೀಲ್ ಸ್ಮಾರಕ ಪಂಪ್ ವೆಲ್ ಪ್ಲೈ ಓವರ್ ಸ್ವಾಗತ ಕೋರುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಅಭಿವೃದ್ಧಿ ಬಗ್ಗೆ ಮಾತನಾಡುವ ಸಂಸದ ನಳಿನ್ ಕುಮಾರ್ ಕಟೀಲ್ ಹತ್ತು ವರುಷಗಳಿಂದ ಯಾವುದಾದರೂ ಸಾಧನೆ ಮಾಡಿದ್ದರೆ ಅದರ ಬಗ್ಗೆ ಸ್ಪಷ್ಟತೆ ನೀಡಿದ ಬಳಿಕ ಕಾಂಗ್ರೆಸ್ ಪಕ್ಷವನ್ನು ದೂರಲೀ ಎಂದು ಹೇಳಿದರು.

ನಗರದ ಮಹಾಕಾಳಿ ಪಡ್ಪುವಿನಲ್ಲಿ ಅಂಡರ್ ಬ್ರಿಡ್ಜ್ ಹಾಗು ಓವರ್ ಬ್ರಿಡ್ಜ್ ಕಾಮಗಾರಿ ಈಗಾಗಲೇ ಆಗಬೇಕಿತ್ತು ಆದರೆ ಇನ್ನು ಆಗಿಲ್ಲ. ಇವರ ನಿರ್ಲಕ್ಷ್ಯತನಕ್ಕೆ ದಿನನಿತ್ಯ ಅಪಘಾತಗಳು ನಡೆಯುತ್ತಿದ್ದು , ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈಗ ಮಂಗಳೂರಿನಲ್ಲಿ ನಳೀನ್ ಕುಮಾರ್ ನೇತೃತ್ವದಲ್ಲಿ ಏನಾದರೂ ಕಾಮಗಾರಿಗಳು ನಡೆಯುತ್ತಾ ಇದ್ದರೆ ಅದು ಕಾಂಗ್ರೇಸ್ ಸರ್ಕಾರ ಅಧಿಕಾರದಲ್ಲಿದ್ದಾಗ ತಂದ ಯೋಜನೆಗಳು ಎಂದು ಹೇಳಿದರು.

Facebook Comments

comments