Connect with us

    LATEST NEWS

    ಪಂಪ್ ವೆಲ್ ವಿಚಾರದಲ್ಲಿ ಕೆಲವರು ‌ಒಳ್ಳೆಯ ನಿಂದನೆ ಮಾಡಿದ್ದಾರೆ ಅದನ್ನ ಸ್ವೀಕರಿಸಿದ್ದೇನೆ – ನಳಿನ್ ಕುಮಾರ್ ಕಟೀಲ್

    ಮಂಗಳೂರು ಜೂನ್ 03: ಸಾಮಾಜಿಕ ಜಾಲತಾಣದಲ್ಲಿ ನನ್ನ ಕೆಲಸಗಳ ಬಗ್ಗೆ ಬಹಳ ಚರ್ಚೆಯಾಗಿದ್ದು, ಆದರೆ ನಾನು ಮಾಡಿರುವ ಕೆಲಸಗಳ ಬಗ್ಗೆ ನನ್ನ ಬಳಿ ಅಧಿಕೃತ ಸರಕಾರಿ ಅಂಕಿ ಅಂಶಗಳಿದ್ದು ಅಭಿವೃದ್ಧಿ ಆಗಿಲ್ಲ ಅನ್ನೋ ಚರ್ಚೆಗೆ ನಾನು ಉತ್ತರ ಕೊಡಲು ಹೋಗಿಲ್ಲ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.


    ಮಂಗಳೂರಿನಲ್ಲಿ ಮಂಗಳೂರಿನಲ್ಲಿ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಸಂಸದ ನಳಿನ್ ನಾನು ಪ್ರಚಾರದ ಹಿಂದೆ ಹೋದವ ಅಲ್ಲ, ನನ್ನ ಕಾರ್ಯವನ್ನ ಗುರುತಿಸಬೇಕು, ಪಂಪ್ ವೆಲ್, ನಂತೂರು ವಿಚಾರಗಳು ನ್ಯಾಯಾಲಯದಲ್ಲಿದ್ದ ಸಮಸ್ಯೆಗಳು, ಈ ವಿಚಾರದಲ್ಲಿ ನಾನು ಮಾತನಾಡಲು‌ ಆಗಲ್ಲ, ಹಾಗಾಗಿ ಸುಮ್ಮನಿದ್ದೆ. ಸಾಮಾನ್ಯ ಕಾರ್ಯಕರ್ತನಾದ ನಾನು ನನ್ನ ಇತಿಮಿತಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ ಎಂದರು. ಆದರ್ಶ ಗ್ರಾಮದಲ್ಲಿ ನಮ್ಮ ಜಲ್ಲೆ ಇಡೀ ದೇಶಕ್ಕೆ ಮಾದರಿ ಆಗಿದೆ. ನಾನು ಮೊದಲ ಬಾರಿ ಎಂಪಿ ಆದಾಗ ಕರೆದು ಟಿಕೆಟ್ ಕೊಟ್ಟರು. ಬೇಡ ಅಂತ ನಾಲ್ಕು ದಿನ ಮೊಬೈಲ್ ಆಫ್ ಮಾಡಿ ಹೋಗಿದ್ದೆ. ಆದರೆ ಆ ಬಳಿಕ ನಾನು ಸಂಘದ ತೀರ್ಮಾನಕ್ಕೆ ಬದ್ದನಾಗಿ ಒಪ್ಪಿಕೊಂಡೆ, ಈಗ ಸಂಘ ಸಾಕು ಅಂದಾಗ ಒಪ್ಪಿಕೊಂಡಿದ್ದೇನೆ. ನಾನು ರಾಜಕೀಯವಾಗಿ ಇದ್ದವನಲ್ಲ, ಸಂಘದ ಪ್ರಚಾರಕ್ಕೆ ಮನೆ ಬಿಟ್ಟವ, ಇಂಥ ಜವಾಬ್ದಾರಿ ಕೊಡಿ ಅಂತ ನಾನು ಯಾವತ್ತೂ ಕೇಳಲೇ ಇಲ್ಲ ಎಂದರು.

    ನಾನು ಪಕ್ಷದ ತೀರ್ಮಾನಕ್ಕೆ ಸಾಯುವವರೆಗೆ ಬದ್ದ, ರಾಜ್ಯಾಧ್ಯಕ್ಷ ಹುದ್ದೆಗೂ ನನಗೆ ರಾತ್ರಿ 2 ಗಂಟೆಗೆ ಅಮಿತ್ ಶಾ ಕರೆ ಮಾಡಿ ಹೇಳಿದ್ರು, ಒಂದು ದಿನ ಬಂದು ಮಾತನಾಡ್ತೇನೆ ಅಂದಾಗಲೂ ಒಪ್ಪದೇ ಪಕ್ಷದ ತೀರ್ಮಾನ ಅಂದ್ರು, ಪಕ್ಷ ಬೆಳೆದಾಗ ನಾವು ಅವಕಾಶಕ್ಕಾಗಿ ಕಾಯಲೇ ಬೇಕು, ಸಾಮಾಜಿಕ ನ್ಯಾಯ, ಚರ್ಚೆಗಳು ಬಂದಾಗ ಒತ್ತಡಗಳು ಇರುತ್ತೆ. ನಾನು ರಾಜ್ಯಾಧ್ಯಕ್ಷನಾಗಿದ್ದಾಗಲೂ ನನಗೆ ಎಲ್ಲರಿಗೆ ಟಿಕೆಟ್ ಕೊಡಿಸಲು ಆಗಿಲ್ಲ, ಅದರೆ ಸಿದ್ದಾಂತ, ತತ್ವ ಅನ್ನೋದು ನಮ್ಮ ಹೃದಯದಲ್ಲಿ ಇರಬೇಕು.
    ಮುಂದಿನ ಬಿಜೆಪಿ ಸಂಸದರಿಗೆ ನಾನು ಸಂಪೂರ್ಣ ಸಹಕಾರ ನೀಡ್ತೇನೆ, ಯಾವುದೇ ಸಂಧರ್ಭದಲ್ಲಿ ನಾನು ಯಾರೇ ಎಂಪಿ ಆದ್ರೂ ಸಹಕಾರ ಕೊಡ್ತೇನೆ. ನಾನು ಧಾರ್ಮಿಕ ಕ್ಷೇತ್ರದಿಂದ ಬಂದವ, ದಾಸರ ವಾಣಿಯಂತೆ ನಿಂದಕರಿರಬೇಕು, ರೆ ನಿಂದನೆಯಲ್ಲಿ ವೈಯಕ್ತಿಕ ದ್ವೇಷ ಇರಬಾರದು. ಒಬ್ಬ ಪರ್ಮನೆಂಟ್ ಆಗಿ ಬೈತಾ ಇದಾನೆ ಅಂದ್ರೆ ಅವನಿಗೆ ವೈಯಕ್ತಿಕ ದ್ವೇಷ ಇರಬೇಕು, ಅಂಥದ್ದನ್ನ ನಾನು ಆದಷ್ಟು ತಲೆಗೆ ತೆಗೆದುಕೊಂಡಿಲ್ಲ ಎಂದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *