DAKSHINA KANNADA
ದ.ಕ ಕೊವೀಡ್ ನಿರ್ವಹಣೆಗೆ ನಳಿನ್ ಕುಮಾರ್ ಕಟೀಲ್ ರವರಿಂದ ರೂ. 2.50 ಕೋಟಿ ಅನುದಾನ

ಮಂಗಳೂರು,ಮೇ 10 : ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ದಕ್ಷಿಣ ಕನ್ನಡ ಸಂಸದರಾದ ಶ್ರೀ ನಳಿನ್ ಕುಮಾರ್ ಕಟೀಲ್ ರವರು ಈ ಸಾಲಿನಲ್ಲಿ ಬಂದಂತಹ ಸಂಸದರ ಪ್ರದೇಶಾಭಿವೃದ್ಧಿ ಸಂಪೂರ್ಣ ಅನುದಾನ ರೂಪಾಯಿ ಎರಡೂವರೆ ಕೋಟಿಗಳನ್ನು ಕೋವಿಡ್ 19 ನಿರ್ವಹಣೆಗೆ ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಕೋವಿಡ್ 19 ಸಾಂಕ್ರಮಿಕ ರೋಗವನ್ನು ಎದುರಿಸಲು ಬೇಕಾದ ವೈದ್ಯಕೀಯ ಪರಿಕರಗಳು ಇತ್ಯಾದಿಗಳನ್ನು ಅಳವಡಿಸಲು ಈ ಅನುದಾನ ಉಪಯೋಗಿಸಿಕೊಳ್ಳಲು ಸೂಚಿಸಿದ್ದಾರೆ.

ನಳಿನ್ ಕುಮಾರ್ ಕಟೀಲ್ ಮನವಿ ಮೇರೆಗೆ ದ.ಕ. ಜಿಲ್ಲೆಗೆ 100 ವೆಂಟಿಲೇಟರ್ ನೀಡಲು ಸಿಎಂ ಒಪ್ಪಿಗೆ : ಮತ್ತೊಂದೆಡೆ ಇಂದು ರಾಜ್ಯದ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ರವರನ್ನು ಭೇಟಿ ಮಾಡಿದ ನಳಿನ್ ಕುಮಾರ್ ಕಟೀಲ್ ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಅಳವಡಿಸಲು 100 ಹೆಚ್ಚುವರಿ ವೆಂಟಿಲೇಟರ್ ಗಳನ್ನು ರಾಜ್ಯ ಸರ್ಕಾರದ ವತಿಯಿಂದ ನೀಡಬೇಕೆಂದು ಮನವಿ ಮಾಡಿದರು,
ಮಾನ್ಯ ಮುಖ್ಯಮಂತ್ರಿಗಳು ಕೂಡಲೇ ಸ್ಪಂದಿಸಿ ಜಿಲ್ಲೆಗೆ 100 ವೆಂಟಿಲೇಟರ್ ಗಳನ್ನ ನೀಡಲು ಒಪ್ಪಿಗೆ ಸೂಚಿಸುತ್ತಾರೆ. ಕೋವಿಡ್ 19 ಸಾಂಕ್ರಾಮಿಕ ರೋಗವನ್ನು ಎದುರಿಸುವ ನಿಟ್ಟಿನಲ್ಲಿ ಸ್ಪಂದಿಸಿದ ಮಾನ್ಯ ಮುಖ್ಯಮಂತ್ರಿಯವರಿಗೆ ನಳಿನ್ ಕುಮಾರ್ ಕಟೀಲ್ ರವರು ಕೃತಜ್ಞತೆ ಸಲ್ಲಿಸಿರುತ್ತಾರೆ.