DAKSHINA KANNADA
ಮುಸ್ಲಿಂ ಹೆಣ್ಣು ಮಕ್ಕಳಿಂದ ಡಾ.ಪ್ರಭಾಕರ ಭಟ್ ಮೇಲೆ ಬಲವಂತವಾಗಿ ಕೇಸು ಹಾಕಿಸಲಾಗುತ್ತಿದೆ: ಶಾಸಕ ಡಾ.ಭರತ್ ಶೆಟ್ಟಿ
ಮಂಗಳೂರು : ಮುಸ್ಲಿಂ ಸಮುದಾಯದಲ್ಲಿ ಪುರುಷ ಸಮಾಜ ಬಲಾಡ್ಯವಾಗಿದ್ದು, ಮಹಿಳೆಯರ ಮೇಲಿನ ತಮ್ಮ ದೌಲತ್ತು ಬಿಟ್ಟುಕೊಡಲು ತಯಾರಿಲ್ಲ. ಮುಂದಿನ ದಿನಗಳಲ್ಲಿ ಮರ್ಯಾದಿ ಸಿಗುವುದಿಲ್ಲ ಎಂಬ ಅಳುಕಿನಿಂದ ಮುಸ್ಲಿಂ ಹೆಣ್ಣು ಮಕ್ಕಳನ್ನ ಮುಂದಿಟ್ಟುಕೊಂಡು ಬಲವಂತವಾಗಿ ಅವರಿಂದ ಕಲ್ಲಡ್ಕ ಪ್ರಭಾಕರ ಭಟ್ ಅವರ ಮೇಲೆ ಕೇಸು ದಾಖಲಿಸುವ ಷಡ್ಯಂತ್ರ ಇದಾಗಿದೆ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಗಂಭೀರ ಆರೋಪ ಮಾಡಿದ್ದಾರೆ.
ಪ್ರಭಾಕರ್ ಭಟ್ ಅವರು ಮುಸ್ಲಿಂ ಹೆಣ್ಣು ಸಮಾಜಕ್ಕೆ ಸಿಕ್ಕಿರುವ ಗೌರವ, ತ್ರಿವಳಿ ತಲಾಕ್ ನಿಷೇಧ, ಪ್ರಧಾನಿ ಮೋದಿ ಅವರ ದೃಢ ಸಂಕಲ್ಪವನ್ನು ಹೇಳಿದ್ದಾರೆ ಹೊರತು ಇದರಲ್ಲಿ ಮುಸ್ಲಿಂ ಮಹಿಳಾ ಸಮಾಜಕ್ಕೆ ನೋವಾಗುವ ವಿಚಾರವಿಲ್ಲ ಎಂದು ಡಾ.ಪ್ರಭಾಕರ್ ಭಟ್ ಹೇಳಿಕೆ ಸಮರ್ಥಿಸಿಕೊಂಡಿದ್ದಾರೆ.ಕಟ್ಟರ್ ಹಿಂದುತ್ವ ,ಆರ್ ಎಸ್ ಎಸ್ ನೇತಾರರಿಗೆ,ಹಿಂದೂ ವಿರೋಧಿ ಸರಕಾರ ಬಂದಾಗ ಹಿಂದೂಗಳ ವಿರುದ್ದ ಕಾನೂನು ಕ್ರಮ ನಿರೀಕ್ಷಿತ.ಅದನ್ನು ಸಮರ್ಥವಾಗಿ ಎದುರಿಸಲಾಗುವುದು ಎಂದು ಹೇಳಿದ್ದಾರೆ.
ಮುಸ್ಲಿಂ ಸಮುದಾಯದಲ್ಲಿ ಪುರುಷ ಸಮಾಜ ಬಲಾಢ್ಯವಾಗಿದ್ದು ಹೆಣ್ಣು ಮಕ್ಕಳನ್ನು ಅಡಿಗೆ ಕೋಣೆಗೆ ಸೀಮಿತಗೊಳಿಸುವಂತಹ ಸಂಕುಚಿತ ಮನೋಭಾವವನ್ನು ಹೊಂದಿರುವವರ ಸಂಖ್ಯೆ ಈಗಲೂ ಹೆಚ್ಚಿದೆ ಎಂದಿದ್ದಾರೆ ಟೀಕಿಸಿದ್ದು,ಕೇಂದ್ರದ ಮೋದಿ ಸರಕಾರವು ನೊಂದ ಅಲ್ಪಸಂಖ್ಯಾತ ಹೆಣ್ಣು ಮಕ್ಕಳ ಬಾಳಿನಲ್ಲಿ ಬೆಳಕು ತಂದ ಸರಕಾರ ವಾಗಿದೆ.ಇದನ್ನು ಕಾಂಗ್ರೆಸ್ ಎಡಪಕ್ಷಗಳು ಸಹಿಸದೆ ಇಂತಹ ಕುತಂತ್ರ ಹಣೆಯುತ್ತಲೇ ಇವೆ ಎಂದು ಟೀಕಿಸಿದ್ದಾರೆ.