LATEST NEWS
ದೀಪಕ್ ರಾವ್ ಕೊಲೆ ಪ್ರಕರಣ – ಸಂಪೂರ್ಣ ಬಂದ್ ಆದ ಸುರತ್ಕಲ್ ಕಾಟಿಪಳ್ಳ
ದೀಪಕ್ ರಾವ್ ಕೊಲೆ ಪ್ರಕರಣ – ಸಂಪೂರ್ಣ ಬಂದ್ ಆದ ಸುರತ್ಕಲ್ ಕಾಟಿಪಳ್ಳ
ಮಂಗಳೂರು ಜನವರಿ 4: ನಿನ್ನೆ ಹತ್ಯೆಗೀಡಾಗಿದ್ದ ದೀಪಕ್ ರಾವ್ ಶವಯಾತ್ರೆ ಹಿನ್ನಲೆಯಲ್ಲಿ ಸುರತ್ಕಲ್ ಹಾಗೂ ಕಾಟಿಪಳ್ಳ ಸಂಪೂರ್ಣ ಬಂದ್ ಆಗಿದೆ. ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ನಿರ್ಬಂಧಕಾಜ್ಞೆ ಜಾರಿಯ ಹೊರತಾಗಿಯೂ ಶವಯಾತ್ರೆಗೆ ಸಿದ್ಧತೆ ನಡೆಸಲಾಗಿತ್ತು. ಮಂಗಳೂರಿನ ಎ.ಜೆ ಆಸ್ಪತ್ರೆ ಮುಂಭಾಗದಲ್ಲಿ ಕಾರ್ಯಕರ್ತರು ಜಮಾವಣೆ ಗೊಂಡು ಮುಂಜಾನೆ 10 ಗಂಟೆ ವೇಳೆಗೆ ಮಂಗಳೂರಿನಿಂದ ಕಾಟಿಪಳ್ಳದ ವರೆಗೆ ಶವಯಾತ್ರೆ ಗೆ ಯೋಜನೆ ರೂಪಿಸಲಾಗಿತ್ತು.
ದೀಪಕ್ ರಾವ್ ಶವ ಯಾತ್ರೆ ಹಿನ್ನೆಲೆಯಲ್ಲಿ ಸುರತ್ಕಲ್, ಕಾಟಿಪಳ್ಳ ಸಂಪೂರ್ಣ ಬಂದ್ ಆಗಿದ್ದು, ಸ್ವಯಂ ಘೋಷಿತ ಬಂದ್ ಗೆ ಹಿಂದೂ ಜಾಗರಣ ವೇದಿಕೆ, ಬಜರಂಗದಳ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಪರಿಸರದಲ್ಲಿ ಬಸ್, ವಾಹನ ಸಂಚಾರ ಪೂರ್ತಿ ಸ್ಥಗಿತಗೊಂಡಿದೆ. ಅಂಗಡಿ ಮುಂಗಟ್ಟು ಮುಚ್ಚಿವೆ
ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಗೆ ಕ್ರಮ ಕೈಗೊಳ್ಳಲಾಗಿದೆ. ಬಂದೋದಸ್ತ್ ಗೆ 5 ಕೆಎಸ್ ಆರ್ ಪಿ, 6 ಸಿಎಆರ್ ತುಕಡಿ, 500 ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಗೊಳಿಸಲಾಗಿದೆ.
ಮಂಗಳೂರು ಹೊರವಲಯದ ಸುರತ್ಕಲ್ ನಲ್ಲಿ ಎಡಿಜಿಪಿ ಕಮಲ್ ಪಂತ್, ಪೊಲೀಸ್ ಕಮೀಷನರ್ ಟಿ ಆರ್ ಸುರೇಶ್ ಮೊಕ್ಕಾಂ ಹೂಡಿದ್ದಾರೆ.