Connect with us

    LATEST NEWS

    ಇದು ಕಣ್ತಪ್ಪಿನಿಂದ ಆದ ತಪ್ಪೂ ಅಲ್ಲ, ವಿಷಾದದಿಂದ ಮುಗಿಯುವಂತದ್ದಲ್ಲ – ಸುವರ್ಣ ನ್ಯೂಸ್ ವಿರುದ್ದ ಮುನೀರ್ ಕಾಟಿಪಳ್ಳ ಆಕ್ರೋಶ

    ಮಂಗಳೂರು ಮೇ 11: ಕನ್ನಡದ ನ್ಯೂಸ್ ಚಾನಲ್ ಸುವರ್ಣ ನ್ಯೂಸ್ ನಲ್ಲಿ ಹಿಂದೂ ಮತ್ತು ಮುಸ್ಲಿಂರ ಜನಸಂಖ್ಯೆ ಏರಿಳಿತದ ಕುರಿತಂತೆ ಸುದ್ದಿ ವೇಳೆ ಹಿಂದೂಗಳಿಗೆ ಭಾರತದ ಧ್ವಜ ಹಾಗೂ ಮುಸ್ಲಿಂರಿಗೆ ಪಾಕಿಸ್ತಾನದ ದ್ವಜ ಹಾಕಿರುವ ವಿವಾದ ಕುರಿತಂತೆ ಇದೀಗ ಸುವರ್ಣ ನ್ಯೂಸ್ ವಿಷಾದ ವ್ಯಕ್ತಪಡಿಸಿದ್ದು, ಕಣ್ತಪ್ಪಿನಿಂದ ಆದ ಘಟನೆ ಎಂದು ಹೇಳಿದೆ. ಈ ನಡುವೆ ಸುವರ್ಣ ನ್ಯೂಸ್ ವಿರುದ್ದ ಡಿವೈಎಫ್ಐ ಮುಖಂಡ ಮುನಿರ್ ಕಾಟಿಪಳ್ಳ ಕಿಡಿಕಾರಿದ್ದು, ಅದೊಂದು ದುರುದ್ದೇಶ ಪೂರ್ವಕ ಕೃತ್ಯ ಎಂದಿದ್ದಾರೆ.


    ಪ್ರತಿಕಾ ಪ್ರಕಟಣೆ ನೀಡಿರುವ ಮುನಿರ್ ಕಾಟಿಪಳ್ಳ, ಮಾನ್ಯ ಅಜಿತ್ ಹನುಮಕ್ಕನವರ್, ಇದು ಕಣ್ತಪ್ಪಿನಿಂದ ಆದ ತಪ್ಪೂ ಅಲ್ಲ, ವಿಷಾದದಿಂದ ಮುಗಿಯುವಂತದ್ದಲ್ಲ. ಭಾರತದ ಮುಸಲ್ಮಾನರಿಗೆ “ಪಾಕ್ ಧ್ವಜ” ವೂ ಹಿಂದುಗಳಿಗೆ ಭಾರತದ ರಾಷ್ಟ್ರ ಧ್ವಜವನ್ನೂ ಹಾಕಿರುವುದು ನಿಮ್ಮ (ಸುವರ್ಣ ವಾಹಿನಿ ಹಾಗೂ ಅಜಿತ್) ಮನಸ್ಥಿತಿಯ ಅನಾವರಣ ಅಷ್ಟೆ ಅಲ್ಲ, ಅದೊಂದು ದುರುದ್ದೇಶ ಪೂರ್ವಕ ಕೃತ್ಯ, ಭಾರತೀಯ ಮುಸ್ಲಿಮರ ಮೇಲಿನ ಸಂಘಟಿತ ಪಿತೂರಿ. ಈ ರೀತಿಯ ಸಂಕೇತಗಳು, ಅದರ ಜೊತೆಗಿನ ನಂಜು ಭರಿತ ಸತತ ಸುದ್ದಿಗಳ ಮೂಲಕ ನೀವು ಭಾರತದ ಮುಸಲ್ಮಾನರನ್ನು “ಅನ್ಯ” ರನ್ನಾಗಿಸುವ “ರಾಜಕಾರಣ” ವನ್ನು ಯಶಸ್ವಿಯಾಗಿ ಮಾಡುತ್ತಲೇ ಬಂದಿದ್ದೀರಿ. ಇದೆಲ್ಲದರಿಂದ ಭಾರತದ ತುಂಬೆಲ್ಲಾ ಗುಣಪಡಿಸಲಾಗದಷ್ಟು ಗಾಯಗಳಾಗಿವೆ. ಸಾವಿರಾರು ಮನೆಗಳ ಬೆಳಕೇ ನಂದಿದೆ.


    ಇದೀಗ ಅಂತಹ ಪಿತೂರಿ ಪ್ರಕರಣದಲ್ಲಿ ಸಾಕ್ಷಿ ಸಮೇತ ಸಿಕ್ಕಿ ಬಿದ್ದಿದ್ದೀರಿ. ನಿಮ್ಮ ಭಕ್ತ ಮಂಡಳಿಯ ಮೂಲಕ “ಎಡಿಟೆಡ್ ಪೋಸ್ಟರ್” ಎಂದು ತಿಪ್ಪೆ ಸಾರಿಸಲು ಹೋಗಿ ವಿಫಲರಾದಿರಿ. ಈಗ “ಕಣ್ತಪ್ಪು, ವಿಷಾದ” ಎಂದು ಪ್ರಕರಣವನ್ನು ಗೌಣಗೊಳಿಸಲು ಹತಾಷ ಯತ್ನ ನಡೆಸುತ್ತಿದ್ದೀರಿ. ನಿಮ್ಮ ಇಂತಹ ಆಟಗಳನ್ನು ನಾಡು ನೋಡುತ್ತಲೇ ಬಂದಿದೆ. ರಾಜ್ಯ ಸರಕಾರ ಇದನ್ನು “ವಿಷಾದ” ದಲ್ಲಿ ಮುಗಿಸಬಾರದು. “ದೇಶ ದ್ರೋಹ, ಆಂತರಿಕ ದಂಗೆ” ಗೆ ಪ್ರಚೋದನೆ ಎಂದು ಪರಿಗಣಿಸಿ ಬಿಗಿಯಾದ ಕಾನೂನು ಕ್ರಮ ಕೈಗೊಳ್ಳಬೇಕು. ಮಾಧ್ಯಮವು ಮಾಧ್ಯಮವಾಗಿರಬೇಕೆ ಹೊರತು ಬಡಪಾಯಿಗಳ ರಕ್ತ ಹರಿಸುವ ಸಂಚುಕೋರ ಗುಂಪು ಆಗಬಾರದು ಎಂದು ತಿಳಿಸಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *