FILM
ಹಾಟ್ ಬೆಡಗಿ ಪೂನಂ ಪಾಂಡೆಗೆ ಮತ್ತೆ ಗಂಡನಿಂದ ಹಲ್ಲೆ.. ಆಸ್ಪತ್ರೆಗೆ ದಾಖಲು
ಮುಂಬೈ: ಬಾಲಿವುಡ್ ನ ಹಾಟ್ ಬೆಡಗಿ ಪೂನಂ ಪಾಂಡೆ ಮೇಲೆ ಮತ್ತೆ ಆಕೆಯ ಗಂಡ ಹಲ್ಲೆ ಮಾಡಿದ್ದು, ಇದೀಗ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಹಿಂದೆ ಮದುವೆಯಾಗಿ ಗೋವಾಗೆ ತೆರಳಿದ್ದ ಸಂದರ್ಭ ಪತಿ, ನಿರ್ಮಾಪಕ ಸ್ಯಾಮ್ ಬಾಂಬೆ ವಿರುದ್ಧ ಹಲ್ಲೆ ಪ್ರಕರಣ ದಾಖಲಿಸಿ ನಟಿ ಜೈಲಿಗಟ್ಟಿದ್ದರು. ಇದೀಗ ಜೈಲಿನಿಂದ ಹೊರಬರುತ್ತಿದ್ದಂತೆಯೇ ಪೂನಂ ಮೇಲೆ ಸ್ಯಾಮ್ ಮತ್ತೆ ಹಲ್ಲೆ ಮಾಡಿದ್ದಾರೆ.
ಪತಿ ಸ್ಯಾಮ್ ಜೈಲಿನಿಂದ ಹೊರಬರುತ್ತಿದ್ದಂತೆಯೇ ನನ್ನ ಮೇಲೆ ಮತ್ತೆ ಹಲ್ಲೆ ಮಾಡಿದ್ದಾರೆ ಎಂದು ಪೂನಂ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಯಾಮ್ ನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಇತ್ತ ಹಲ್ಲೆಯಿಂದ ಮುಖ, ಕಣ್ಣು ಹಾಗೂ ತಲೆಗೆ ಗಾಯಗೊಂಡಿರುವ ಪೂನಂ ಅವರನ್ನು ಮುಂಬೈ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.