LATEST NEWS
ಮುಂಬೈ – 12ನೇ ಮಹಡಿಯ ಮನೆ ಕಿಟಕಿಯಿಂದ ಬಿದ್ದು 4 ವರ್ಷದ ಬಾಲಕಿ ಸಾವು

ಮುಂಬೈ ಜುಲೈ 25 : ಭೀಕರ ದುರಂತವೊಂದರಲ್ಲಿ 12 ಮಹಡಿಯ ಕಿಟಕಿಯಿಂದ ಕೆಳಗೆ ಬಿದ್ದು ನಾಲ್ಕು ವರ್ಷದ ಬಾಲಕಿ ಸಾವನ್ಪಪಿದ ಘಟನೆ ಮುಂಬೈ ನ ನೈಗಾಂವ್‌ನ ನವಕರ್ ಸಿಟಿಯಲ್ಲಿ ನಡೆದಿದೆ.
ಮೃತ ಬಾಲಕಿಯನ್ನು ಅನ್ವಿಕಾ ಪ್ರಜಾಪತಿ ಎಂದು ಗುರುತಿಸಲಾಗಿದೆ. ಘಟನೆಯ ಸಿಸಿಟಿವಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಿಸಿಟಿವಿ ವಿಡಿಯೋದಲ್ಲಿರುವಂತೆ ಬಾಲಕಿ ಮತ್ತು ಆಕೆಯ ತಾಯಿ ಮನೆಯಲ್ಲಿ ಹೊರಗೆ ಹೊರಡಲು ತಯಾರಾಗುತ್ತಾರೆ. ಈ ವೇಳೆ ಪುಟ್ಟ ಬಾಲಕಿಯನ್ನು ಆಕೆಯ ತಾಯಿ ಚಪ್ಪಲಿಗಳನ್ನು ಇಡುವ ಟೆಬಲ್ ಮೇಲೆ ಕುರಿಸಿದ್ದಾರೆ. ಆದರೆ ಬಾಲಕಿ ಅಲ್ಲಿ ಎಂದು ನಿಂತಿದ್ದಾಳೆ. ಓಪನ್ ಕಿಟಕಿ ಇದ್ದು, ಈ ವೇಳೆ ಬಾಲಕಿ ಕಿಟಕಿಯಲ್ಲಿ ಕುಳಿತುಕೊಳ್ಳಲು ಹೋಗಿದ್ದಾಳೆ. ಇದರಿಂದಾಗಿ ಬಾಲಕಿ ಸೀದಾ ಕೆಳಗೆ ಬಿದ್ದಿದ್ದಾಳೆ. ಕೂಡಲೇ ಮನೆಯವರು ಕೆಳಗೆ ಓಡಿದ್ದಾರೆ. ಆದರೆ 12 ನೇ ಮಹಡಿಯಿಂದ ಬಿದ್ದ ಕಾರಣ ಬಾಲಕಿಯ ತಲೆಗೆ ಗಂಭೀರಗಾಯಗಳಾಗಿತ್ತು.

ಕೂಡಲೇ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಬಾಲಕಿ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾಳೆ. ಒಂದು ಸಣ್ಣ ನಿರ್ಲಕ್ಷ್ಯ ಪುಟ್ಟ ಬಾಲಕಿಯ ಜೀವ ತೆಗೆದುಕೊಂಡಿದೆ.