LATEST NEWS
ಮುಂಬೈ: ದಯಾ ನಾಯಕ್ ತಂಡದ ಕಾರ್ಯಾಚರಣೆ 2.04 ಕೋಟಿ ಮೌಲ್ಯದ ನಿಷೇಧಿತ ಮೆಫೆಡ್ರೋನ್ ವಶ..!!
ಮಹತ್ವದ ಕಾರ್ಯಾಚರಣೆಯೊಂದರಲ್ಲಿ 2.04 ಕೋಟಿ ಮೌಲ್ಯದ ಮೆಫೆಡ್ರೋನ್ (mephedrone) ನನ್ನು ದಯಾ ನಾಯಕ್ ನೇತೃತ್ವದ ಕ್ರೈಂ ಬ್ರಾಂಚ್ ವಶಕ್ಕೆ ಪಡೆದಿದೆ.
ಮುಂಬೈ: ಮಹತ್ವದ ಕಾರ್ಯಾಚರಣೆಯೊಂದರಲ್ಲಿ 2.04 ಕೋಟಿ ಮೌಲ್ಯದ ಮೆಫೆಡ್ರೋನ್ (mephedrone) ನನ್ನು ದಯಾ ನಾಯಕ್ ನೇತೃತ್ವದ ಕ್ರೈಂ ಬ್ರಾಂಚ್ ವಶಕ್ಕೆ ಪಡೆದಿದೆ.
ಬಾಂದ್ರಾ ಕ್ರೈM ಬ್ರಾಂಚ್ ಹಿರಿಯ ಪೊಲೀಸ್ ಇನ್ಸ್ಪೆಕ್ಟರ್ ದಯಾ ನಾಯಕ್ ನೇತೃತ್ವದ ತಂಡ ಈ ಮಹತ್ವದ ಕಾರ್ಯಾಚರಣೆ ನಡೆಸಿದೆ.
ಸಲೀಂ ಹರೂನ್ ರಶೀದ್ ಖಾನ್ ಮತ್ತು ಇಮ್ರಾನ್ ಶೋಯೆಬ್ ಖಾನ್ ಎಂಬ ಇಬ್ಬರು ವ್ಯಕ್ತಿಗಳು ಸಂಶ್ಲೇಷಿತ ಉತ್ತೇಜಕವಾದ ಮೆಫೆಡ್ರೋನ್ ಅನ್ನು ವಾಣಿಜ್ಯ ಪ್ರಮಾಣದಲ್ಲಿ ಹೊಂದಿದ್ದಾರೆ ಎಂಬ ಖಚಿತ ಮಾಹಿತಿ ಪಡೆದ ಕ್ರೈಂ ಬ್ರಾಂಚ್ ಈ ಕಾರ್ಯಾಚರಣೆ ನಡೆಸಿದೆ.
ಮುಂಬೈ 15ರ ಸೆವ್ರಿಯ ಮುಕದ್ದಾಸ್ ಮಸೀದಿ ಬಳಿಯ ಸೆವ್ರಿ ಕ್ರಾಸ್ ರಸ್ತೆಯ ಆದಂಜಿ ಜೀವಾಜಿ ಚಾವ್ಲ್ ಗೆ ದಾಳಿ ನಡೆಸಿದ ತಂಡ ಆರೋಪಿ ಸಲೀಂ ಹರೂನ್ ರಶೀದ್ ಖಾನ್ ಅವರನ್ನು ಸ್ಥಳದಲ್ಲೇ ಬಂಧಿಸಿದೆ.
ಮತ್ತೋರ್ವ ಆರೋಪಿ ಇಮ್ರಾನ್ ಶೋಯೆಬ್ ಖಾನ್ ಪೊಲೀಸರ ಬಲೆಯಿಂದ ತಪ್ಪಿಸಿಕೊಂಡಿದ್ದಾನೆ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ 2 ಕೋಟಿ 4 ಲಕ್ಷ ರೂ. ಮೌಲ್ಯದ 1028 ಗ್ರಾಂ ನಿಷೇಧಿತ ಮೆಫೆಡ್ರೋನನ್ನು ತಂಡ ಜಪ್ತಿ ಮಾಡಿದೆ.
ಆರೋಪಿ ಸಲೀಂ ಸೌದಿ ಅರೇಬಿಯಾದಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದು, ಒಂದು ವರ್ಷದ ಹಿಂದೆ ಮುಂಬೈಗೆ ವಾಪಸಾಗಿದ್ದ.
ನಂತರ ಅಂಧೇರಿ ಮೂಲದ ಬಿಲ್ಡರ್‌ನ ಬಳಿ ಡ್ರೈವರ್ ಆಗಿ ಕೆಲಸ ಮಾಡಲು ಆರಂಭಿಸಿದ.
ಕೆಲ ತಿಂಗಳ ಹಿಂದೆ ಕಾಲಿಗೆ ಏಟಾಗಿದ್ದರಿಂದ ಕೆಲಸ ತೊರೆದಿದ್ದ ಸಲೀಂ ನಂತರ ಪೆಡ್ಲರ್, ಇಮ್ರಾನ್ ಜೊತೆ ಸಂಪರ್ಕಕ್ಕೆ ಬಂದಿದ್ದ,
ಅವರು ಅವರಿಗೆ ಎಂಡಿ ಸರಬರಾಜು ಮಾಡಲು ಪ್ರಾರಂಭಿಸಿದರು.
ಸಲೀಂ ನಗರದಲ್ಲಿ ಸಣ್ಣ ಪೆಡ್ಲರ್‌ಗಳಿಗೆ ಡ್ರಗ್ಸ್ ಸರಬರಾಜು ಮಾಡ್ತಿದ್ದರು,” ಎಂದು ಮುಂಬೈ ಅಪರಾಧ ವಿಭಾಗದ ಉಪ ಪೊಲೀಸ್ ಆಯುಕ್ತ ರಾಜ್ ತಿಲಕ್ ರೌಶನ್ ಹೇಳಿದ್ದಾರೆ.
“ಆರ್‌ಎಕೆ ಮಾರ್ಗ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಎನ್‌ಡಿಪಿಎಸ್ ಕಾಯ್ದೆಯಡಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಆಗಸ್ಟ್ 25 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.