Connect with us

FILM

ಮುಂಬೈ – ಡ್ರಗ್ಸ್ ಪ್ರಕರಣದಲ್ಲಿ ಬಂಧಿತ ನಟಿ ಶಾರ್ಜಾ ಜೈಲಿನಿಂದ ಬಿಡುಗಡೆ

ಮುಂಬೈ ಎಪ್ರಿಲ್ 27: ಮಾದಕ ವಸ್ತು ಸಾಗಾಟದ ಆರೋಪದ ಮೇಲೆ ಶಾರ್ಜಾದಲ್ಲಿ ಅರೆಸ್ಟ್ ಆಗಿರುವ ನಟಿ ಕ್ರಿಸನ್ ಪಿರೇರಾ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ನಟಿಯ ತಾಯಿ ಮಾಡಿದ ಗಲಾಟೆಗೆ ಪ್ರತೀಕಾರವಾಗಿ ವ್ಯಕ್ತಿಯೊಬ್ಬ ನಟಿಯನ್ನು ಡ್ರಗ್ಸ್ ಜಾಲದಲ್ಲಿ ಸಿಲುಕಿ ಹಾಕಿದ್ದು, ನಟಿ ಕ್ರಿಸನ್ ಪಿರೇರಾ ಅವರನ್ನು ಶಾರ್ಜಾದಲ್ಲಿ ಬಂಧಿಸಲಾಗಿತ್ತು. ಇದೀಗ ಈ ಪ್ರಕರಣದ ಪ್ರಮುಖ ಆರೋಪಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದು, ಈ ಹಿನ್ನಲೆ ನಟಿಯನ್ನು ಶಾರ್ಜಾ ಪೊಲೀಸರು ಬಿಡುಗಡೆ ಮಾಡಿದ್ದಾರೆ ಎಂದು ಸಹೋದರ ಕೆವಿನ್ ಪಿರೇರಾ ಖಚಿತಪಡಿಸಿದ್ದಾರೆ ಎಂದು ಎಎನ್ಐ ಸುದ್ದಿ ಸಂಸ್ಥೆ ತಿಳಿಸಿದೆ.


ಘಟನೆಯ ವಿವರ

ಪೌಲ್ ಅವರು ಮುಂಬೈನ ಮಲಾಡ್ ಮತ್ತು ಬೊರಿವೆಲಿ ಪ್ರದೇಶಗಳಲ್ಲಿ ಬೇಕರಿ ನಡೆಸುತ್ತಿದ್ದಾರೆ. ಪೌಲ್ ನ ಸಹೋದರಿಯರಲ್ಲಿ ಒಬ್ಬಳು ಕ್ರಿಸ್ಸನ್ ನ ತಾಯಿ ವಾಸಿಸುವ ಅಪಾರ್ಟ್ಮೆಂಟ್ ನಲ್ಲಿಯೇ ವಾಸಿಸುತ್ತಾಳೆ. 2020 ರಲ್ಲಿ ಕೋವಿಡ್-19 ಪ್ರೇರಿತ ಲಾಕ್ಡೌನ್ ಸಮಯದಲ್ಲಿ, ಪೌಲ್ ತನ್ನ ಸಹೋದರಿಯನ್ನು ನೋಡಲು ಹೋಗಿದ್ದಾಗ, ಪ್ರಮೀಳಾ ಅವರ ಸಾಕು ನಾಯಿ ಅವನ ಮೇಲೆ ಬೊಗಳಿತು ಮತ್ತು ಅವನ ಮೇಲೆ ಹಾರಲು ಪ್ರಯತ್ನಿಸಿತು. ತನ್ನನ್ನು ರಕ್ಷಿಸಿಕೊಳ್ಳಲು, ಪೌಲ್ ನಾಯಿಗೆ ಹೊಡೆಯುವ ಪ್ರಯತ್ನದಲ್ಲಿ ಕುರ್ಚಿಯನ್ನು ಎತ್ತಿಕೊಂಡನು. ಇದನ್ನು ನೋಡಿದ ಪ್ರಮೀಳಾ ಕೋಪಗೊಂಡು ಅಪಾರ್ಟ್ಮೆಂಟಿನ ಇತರ ನಿವಾಸಿಗಳ ಮುಂದೆ ಅವನನ್ನು ಅವಮಾನಿಸಿದ್ದಳು. ಈ ಘಟನೆಯ ಸೇಡು ತೀರಿಸಿಕೊಳ್ಳಲು, ಪೌಲ್ ಕ್ರಿಸ್ಸನ್ ರನ್ನು ಈ ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿಸುವ ಪ್ಲ್ಯಾನ್ ಮಾಡಿದರಂತೆ.
ರಿಯಲ್ ಎಸ್ಟೇಟ್ ಸಂಬಂಧಿತ ಕೆಲಸದ ಬಗ್ಗೆ ಪ್ರಮೀಳಾ ಅವರ ಮೊಬೈಲ್ ಸಂಖ್ಯೆಗೆ ಎಸ್ಎಂಎಸ್ ವೊಂದು ಬಂದಿತಂತೆ. ಆಗ ಪ್ರಮೀಳಾ ಆ ಸಂಖ್ಯೆಗೆ ಕಾಲ್ ಮಾಡಿದ್ದಾರೆ ಮತ್ತು ರವಿ ಜೊತೆ ಮಾತಾಡಿದ್ದಾರೆ.


ಪ್ರಮೀಳಾ ಅವರನ್ನು ತನ್ನ ಕಚೇರಿಗೆ ಬಂದು ಭೇಟಿಯಾಗಲು ಹೇಳಿದರಂತೆ. ರವಿ ಪ್ರಮೀಳಾ ಅವರನ್ನು ಅವರ ಕುಟುಂಬದ ಬಗ್ಗೆ ಕೇಳಿದರಂತೆ ಮತ್ತು ಅವರು ತಮ್ಮ ಮಗಳು ಚಲನಚಿತ್ರಗಳಲ್ಲಿ ಕೆಲಸ ಮಾಡುವ ಬಗ್ಗೆ ಹೇಳಿಕೊಂಡಿದ್ದಾರೆ. ನಂತರ ರವಿ ತಾನು ‘ಟ್ಯಾಲೆಂಟ್ ಪೂಲ್’ ಎಂಬ ಟ್ಯಾಲೆಂಟ್ ಮ್ಯಾನೇಜ್ಮೆಂಟ್ ಕಂಪನಿಯನ್ನು ಹೊಂದಿದ್ದೇನೆ ಮತ್ತು ಅದು ಅಂತರರಾಷ್ಟ್ರೀಯ ವೆಬ್ ಸಿರೀಸ್ ವೊಂದಕ್ಕೆ ನಟಿಯನ್ನು ಹುಡುಕುತ್ತಿದೆ ಎಂದು ಹೇಳಿದನಂತೆ. ಹೋಟೆಲ್ ಗ್ರ್ಯಾಂಡ್ ಹಯಾತ್ ನಲ್ಲಿ ಒಂದು ಸಭೆಯನ್ನು ಏರ್ಪಡಿಸಲಾಯಿತು ಮತ್ತು ನಟಿಯನ್ನು ಅಲ್ಲಿ ಆಯ್ಕೆ ಮಾಡಲಾಯಿತು. ಆಡಿಷನ್ ಗಾಗಿ ಅವಳು ದುಬೈಗೆ ಹೋಗಬೇಕಾಗುತ್ತದೆ ಎಂದು ಅವಳಿಗೆ ತಿಳಿಸಲಾಯಿತು.


ಎಪ್ರಿಲ್ 1 ರಂದು ಶಾರ್ಜಾಗೆ ಪ್ರಯಾಣಿಸಲು ಕ್ರಿಸ್ಸನ್ ಅವರ ಟಿಕೆಟ್ ಗಳನ್ನು ಬುಕ್ ಮಾಡಲಾಯಿತು ಮತ್ತು ಶಾರ್ಜಾದಿಂದ ದುಬೈಗೆ ಪ್ರಯಾಣಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ರವಿ ಆಕೆಗೆ ತಿಳಿಸಿದ್ದರು. ಹಿಲ್ಟನ್ ಹೋಟೆಲ್ ನಲ್ಲಿ ಆಕೆಗೆ ರೂಂ ಸಹ ಬುಕ್ ಮಾಡಲಾಗಿದೆ ಅಂತ ಹೇಳಿದರಂತೆ. ಶಾರ್ಜಾಗೆ ಹೊರಡುವ ಮೊದಲು, ರವಿ ಅವಳಿಗೆ ಡ್ರಗ್ಸ್ ಹೊಂದಿರುವ ಟ್ರೋಫಿಯನ್ನು ನೀಡಿದರು ಮತ್ತು ಆಡಿಷನ್ ಗೆ ಇದು ಅಗತ್ಯವಿದೆ ಅಂತ ಕ್ರಿಸ್ಸನ್ ಗೆ ತಿಳಿಸಿದರಂತೆ. ಆಗ ನಟಿ ಆ ಟ್ರೋಫಿಯನ್ನು ತನ್ನೊಂದಿಗೆ ತೆಗೆದುಕೊಂಡು ವಿಮಾನ ಹತ್ತಿದಳು.


ಕ್ರಿಸ್ಸನ್ ಶಾರ್ಜಾ ತಲುಪಿದಾಗ, ತನ್ನ ಬುಕಿಂಗ್ ಅನ್ನು ಖಚಿತಪಡಿಸಿಕೊಳ್ಳಲು ಅಲ್ಲಿನ ಹೋಟೆಲ್ ನೊಂದಿಗೆ ಪರಿಶೀಲಿಸಿದಾಗ ಹೋಟೆಲ್ ನ ಬುಕಿಂಗ್ ದಾಖಲೆಯಲ್ಲಿ ತನ್ನ ಹೆಸರನ್ನು ಉಲ್ಲೇಖಿಸಲಾಗಿಲ್ಲ ಎಂದು ತಿಳಿದು ಬಂದಿದೆ. ನಂತರ ಅವಳು ಆ ಟ್ರೋಫಿಯೊಂದಿಗೆ ಅಲ್ಲಿನ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿದರಂತೆ. ಟ್ರೋಫಿಯೊಳಗೆ ಡ್ರಗ್ಸ್ ಇರುವುದನ್ನು ನೋಡಿದ ಪೊಲೀಸರು ಆಕೆಯನ್ನು ಕೂಡಲೇ ಬಂಧಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *