LATEST NEWS
ಮುಲ್ಕಿ ಪಕ್ಷಿಕೆರೆ ಪ್ರಕರಣ – ಕಾರ್ತಿಕ್ ಹೆತ್ತವರು ತುಂಬಾ ತೊಂದರೆ ಕೊಟ್ಟಿದ್ದಾರೆ – ಪ್ರಿಯಾಂಕಾ ಕುಟುಂಬ ಆರೋಪ
ಮಂಗಳೂರು ನವೆಂಬರ್ 10: ಮುಲ್ಕಿಯ ಪಕ್ಷಿಕೆರೆಯಲ್ಲಿ ಪತ್ನಿ ಮಗುವನ್ನು ಕೊಲೆ ಮಾಡಿ ಬಳಿಕ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಪ್ರಕಣಕ್ಕೆ ಸಂಬಂಧಿಸಿದಂತೆ ಇದೀಗ ಕಾರ್ತಿಕ್ ಭಟ್ ಅವರ ಪತ್ನಿ ಪ್ರಿಯಾಂಕ ಕುಟುಂಬ ಮಂಗಳೂರಿಗೆ ಆಗಮಿಸಿದ್ದು, ಕಾರ್ತಿಕ್ ಭಟ್ ಕುಟುಂಬದ ಮೇಲೆ ಆರೋಪ ಮಾಡಿದ್ದಾರೆ. ಸಾವಿನ ಬಗ್ಗೆ ತನಿಖೆ ನಡೆಸಬೇಕೆಂದು ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ.
ಮಂಗಳೂರಿನ ವೆನ್ಲಾಕ್ ಆಸ್ಪತ್ರೆ ಶವಾಗಾರದಲ್ಲಿ ಮೃತದೇಹಗಳ ಪೋಸ್ಟ್ ಮಾರ್ಟಂ ನಡೆಸಲಾಗಿದ್ದ. ಶವಾಗಾರಕ್ಕೆ ಆಗಮಿಸಿದ ಶಿವಮೊಗ್ಗ ಮೂಲದ ಪ್ರೀಯಾಂಕ ಕುಟುಂಬಸ್ಥರು ಆಗಮಿಸಿದ್ದಾರೆ. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಕಾರ್ತಿಕ್ ಭಟ್ ಬಹಳ ಒಳ್ಳೆಯ ಗುಣ ಸ್ವಭಾವದ ವ್ಯಕ್ತಿಯಾಗಿದ್ದ, ನಮ್ಮ ಕುಟುಂಬಕ್ಕೂ ಕಾರ್ತಿಕ್ ಬಹಳ ಇಷ್ಟವಾಗಿದ್ದ, ಕಾರ್ತಿಕ್ ತನ್ನ ಹೆಂಡತಿ ಮಗುವಿನೊಂದಿಗೆ ಬಹಳ ಅನ್ಯೋನ್ಯವಾಗಿದ್ದ ಎಂದರು. ಕಳೆದ ಬಾರಿ ದಸರಾಗೆ ಬಂದಾಗಲೂ ತುಂಬಾ ಖುಷಿಯಲ್ಲಿದ್ದರು. ಅಲ್ಲದೆ ಬೇರೆ ಮನೆ ಮಾಡೋಕೆ ತುಂಬಾ ಕಡೆ ಹುಡುಕಾಟವೂ ಮಾಡಿದ್ದರು ಎಂದರು .
ಕಾರ್ತಿಕ್ ಹೆತ್ತವರು ಇವರಿಗೆ ತುಂಬಾ ತೊಂದರೆ ಕೊಟ್ಟಿದ್ದಾರೆ, ಕಾರ್ತಿಕ್ ಅಕ್ಕನೂ ಈ ಕುಟುಂಬಕ್ಕೆ ಕಿರಿ ಕಿರಿ ಮಾಡಿದ್ದಾರೆ. ಕಳೆದ ದೀಪಾವಳಿ ಸಂಧರ್ಭದಲ್ಲೂ ಗಲಾಟೆಯಾಗಿದೆ. ಈ ಹಿನ್ನಲೆ ಬೀಚ್ ಬಳಿ ಹೋಗಿ ಕಾರ್ತಿಕ್ ಕುಟುಂಬ ಪಟಾಕಿ ಸಿಡಿಸಿ ದೀಪಾವಳಿ ಆಚರಣೆ ಮಾಡಿದ್ದರು. ಮನೆಯಲ್ಲಿ ತಂದೆ ತಾಯಿ ಕಿರಿ ಕಿರಿ ಮಾಡಿದ ಹಿನ್ನಲೆ ಬೀಚ್ ಬಳಿ ಹೋಗಿದ್ದರು. ಕಾರ್ತಿಕ್ ಗೆ ಯಾವುದೇ ಆರ್ಥಿಕವಾದ ಸಮಸ್ಯೆ ಇರಲಿಲ್ಲ, ಅಲ್ಲದೆ ಕಾರ್ತಿಕ್ ತನ್ನ ಪತ್ನಿ ಜೊತೆಯೂ ಗಲಾಟೆ ಮಾಡುತ್ತಿರಲಿಲ್ಲ. ಡತಿ ಜೊತೆ ಜಗಳವಾಡಿ ಹತ್ಯೆ ಮಾಡಿದ್ದಾನೆ ಎಂಬುವುದಾಗಿಯೂ ಬಂದಿದೆ
ಈ ವಿಚಾರ ಸುಳ್ಳು,ಆ ತರ ಯಾವುದೇ ಘಟನೆಗಳು ನಡೆದಿಲ್ಲ, ಕಾರ್ತಿಕ್ ಕೊಲೆ ಮಾಡುವಂತಹ ಕಠೋರ ಮನಸ್ಸಿನ ವ್ಯಕ್ತಿ ಅಲ್ಲ, ಈ ಸಾವಿನ ಬಗ್ಗೆ ನಮಗೆ ಅನುಮಾನ ಇದೆ ಪೊಲೀಸರು ಘಟನೆಯ ಬಗ್ಗೆ ಸೂಕ್ತವಾದ ತನಿಖೆ ಮಾಡಬೇಕು ಎಂದು ಹೇಳಿದ್ದಾರೆ.