LATEST NEWS
ಮುಲ್ಕಿ ಹಾಡುಹಗಲೇ ಉದ್ಯಮಿ ಬರ್ಬರ ಹತ್ಯೆ

ಕೊಲೆಯಲ್ಲಿ ಅಂತ್ಯವಾದ ಹಣಕಾಸಿನ ವಿವಾದ ….?
ಮುಲ್ಕಿ ಜೂನ್ 05: ಮಂಗಳೂರಿನ ಮುಲ್ಕಿಯಲ್ಲಿ ಹಾಡುಹಗಲೇ ಉದ್ಯಮಿಯೊಬ್ಬರ ಬರ್ಬರ ಹತ್ಯೆ ನಡೆದಿದೆ. ಮೃತ ವ್ಯಕ್ತಿಯನ್ನು ಅಬ್ದುಲ್ ಲತೀಫ್ ಎಂದು ಗುರುತಿಸಲಾಗಿದೆ.
ಮೂಡಬಿದಿರೆಯಲ್ಲಿ ಅಲೈನ್ ಎಂಬ ಜ್ಯುವೆಲ್ಲರಿಯ ಮಾಲಿಕರಾಗಿರುವ ಅಬ್ದುಲ್ ಲತೀಪ್ ಅವರನ್ನು ಕಾರು ಹಾಗೂ ಬೈಕ್ ನಲ್ಲಿ ಬಂದ ಎಂಟು ಮಂದಿ ದುಷ್ಕರ್ಮಿಗಳು ಹಾಡುಹಗಲೇ ತಲ್ವಾರ್, ಮಾರಾಕಾಸ್ತ್ರದಿಂದ ಕೊಚ್ಚಿ ಕೊಲೆಗೈದಿದ್ದಾರೆ.

ಹಣಕಾಸಿನ ವಿವಾದ ಈ ಕೊಲೆಗೆ ಕಾರಣ ಎಂದು ಹೇಳಲಾಗಿದೆ. ಈ ಘಟನೆಯಲ್ಲಿ ಲತೀಫ್ ಮಾವ ಮುನೀರ್ ಮತ್ತೊಬ್ಬರು ಗಾಯಗೊಂಡಿದ್ದಾರೆ.