LATEST NEWS
ರಿಲಯನ್ಸ್ ಜಿಯೋ ನಿರ್ದೇಶಕ ಸ್ಥಾನಕ್ಕೆ ಮುಕೇಶ್ ಅಂಬಾನಿ ರಾಜೀನಾಮೆ, ಪುತ್ರ ಆಕಾಶ್ ನೇಮಕ

ಮುಂಬಯಿ, ಜೂನ್ 28: ರಿಲಯನ್ಸ್ ಜಿಯೋ ನಿರ್ದೇಶಕ ಸ್ಥಾನಕ್ಕೆ ಖ್ಯಾತ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ರಾಜೀನಾಮೆ ನೀಡಿದ್ದು, ಕಂಪನಿಯ ಅಧಿಕಾರವನ್ನು ಹಿರಿಯ ಪುತ್ರ ಆಕಾಶ್ ಅಂಬಾನಿಗೆ ಹಸ್ತಾಂತರಿಸಿರುವುದಾಗಿ ವರದಿ ತಿಳಿಸಿದೆ.ಸ್ಟಾಕ್ ಎಕ್ಸ್ ಚೇಂಜ್ ಫೈಲಿಂಗ್ ನಲ್ಲಿ ರಿಲಯನ್ಸ್ ಜಿಯೋ ಉಲ್ಲೇಖಿಸಿರುವಂತೆ, ಜೂನ್ 27ರಂದು ನಡೆದ ಕಂಪನಿಯ ಆಡಳಿತ ಮಂಡಳಿ ಸಭೆಯಲ್ಲಿ ಆಕಾಶ್ ಎಂ ಅಂಬಾನಿ ಅವರನ್ನು ಕಂಪನಿಯ ಆಡಳಿತ ಮಂಡಳಿ ನಿರ್ದೇಶಕರನ್ನಾಗಿ ಆಯ್ಕೆ ಮಾಡಲು ಅನುಮತಿ ನೀಡಿರುವುದಾಗಿ ವರದಿ ವಿವರಿಸಿದೆ.
ಟ್ರಾಯ್ ಅಂಕಿಅಂಶದ ಪ್ರಕಾರ, ಭಾರತದ ಅತೀ ದೊಡ್ಡ ಟೆಲಿಕಾಂ ಆಪರೇಟರ್ ಸಂಸ್ಥೆಯಾದ ರಿಲಯನ್ಸ್ ಜಿಯೋ ಏಪ್ರಿಲ್ ತಿಂಗಳಿನಲ್ಲಿ 16.8 ಲಕ್ಷ ಮೊಬೈಲ್ ಸಬ್ಸ್ ಕ್ರೈಬರ್ಸ್ ಅನ್ನು ಹೊಂದಿರುವುದಾಗಿ ತಿಳಿಸಿದೆ.
