LATEST NEWS
ಮುಡಿಪು:ಗೋಡೆ ಕೊರೆದು ಗೋಲ್ಡ್ ಕಿಂಗ್ ಜ್ಯುವೆಲ್ಲರಿಯಿಂದ ಚಿನ್ನಾಭರಣ ದರೋಡೆ

ಉಳ್ಳಾಲ ಅಗಸ್ಟ್ 06: ಚಿನ್ನದ ಅಂಗಡಿಯ ಗೋಡೆ ಕೊರೆದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನವನ್ನು ದರೋಡೆ ಮಾಡಿರುವ ಘಟನೆ ಮುಡಿಪು ವಿನಲ್ಲಿರುವ ಗೋಲ್ಡ್ ಕಿಂಗ್ ಜ್ಯುವೆಲ್ಲರಿಯಲ್ಲಿ ನಡೆದಿದೆ.
ಕುರ್ನಾಡು ನಿವಾಸಿ ಇಬ್ರಾಹಿಂ ಮಾಲೀಕತ್ವದ ಅಂಗಡಿ ಇದಾಗಿದೆ. ಜ್ಯುವೆಲ್ಲರಿ ಅಂಗಡಿಯ ಎಡಭಾಗದ ಗೋಡೆಯನ್ನು ಕೊರೆದು ಕೃತ್ಯ ನಡೆದಿದೆ. ಘಟನಾ ಸ್ಥಳಕ್ಕೆ ಕೊಣಾಜೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರು ಹಾಗೂ ಶ್ವಾನದಳವನ್ನು ಕರೆಸಲಾಗಿದೆ.

Continue Reading