Connect with us

LATEST NEWS

ಮುಡಿಪು ಚರ್ಚ್ ಗೆ ನುಗ್ಗಿ ಪರಮಪ್ರಸಾದ ಪೆಟ್ಟಿಗೆ ಒಡೆದು ಕಾಣಿಕೆ ಹಣ ಕಳವು

ಮಂಗಳೂರು ಜನವರಿ 25: ಮುಡಿಪುವಿನಲ್ಲಿರುವ ಸಂತ ಜೋಸೆಫ್ ವಾಝ್ ಚರ್ಚ್ ಗೆ ಕಳ್ಳನೋರ್ವ ನುಗ್ಗಿ ಪರಮಪ್ರಸಾದ ಇಡುವ ಪೆಟ್ಟಿಗೆಯನ್ನು ಒಡೆದು ಪರಮಪ್ರಸಾದ ಹಂಚುವ ವಸ್ತುಗಳನ್ನು ಹಾಗೂ ಕಾಣಿಕೆಗೆ ಹಾಕಿರುವ ಹಣವನ್ನು ಕಳ್ಳತನ ಮಾಡಿರುವ ಘಟನೆ ನಡೆದಿದೆ.


ಜನವರಿ 24ರಂದು ರಾತ್ರಿ ಕಳ್ಳ ಚರ್ಚ್ ನ ಬಾಗಿಲು ಮುರಿದು ಒಳನುಗ್ಗಿದ್ದಾನೆ. ಕಳ್ಳ ತಲೆಗೆ ಬಟ್ಟೆ ಕಟ್ಟಿ ಮುಖಕ್ಕೆ ಮಾಸ್ಕ್ ಧರಿಸಿದ್ದ. ಕಳ್ಳತನ ನಡೆಸಿರುವ ಘಟನೆ ಬೆಳಕಿಗೆ ಬಂದ ಕೂಡಲೇ ಚರ್ಚ್ ನ ಪದಾಧಿಕಾರಿಗಳು ಪೊಲೀಸರ ಗಮನಕ್ಕೆ ತಂದಿದ್ದಾರೆ. ಪೊಲೀಸರರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ ಹಾಗೂ ಸಿಸಿಟಿವಿಯ ಫೂಟೆಜ್ ಆಧಾರದಲ್ಲಿ ಕಳ್ಳನ ಸೆರೆಗೆ ಪೊಲೀಸರು ಬಲೆ ಬೀಸಿದ್ದಾರೆ. ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *