Connect with us

LATEST NEWS

ಅಂತರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳಿದ ಮಹೇಂದ್ರ ಸಿಂಗ್ ದೋನಿ

ನವದೆಹಲಿ ಅಗಸ್ಟ್ 15 : ಭಾರತೀಯ ಕ್ರಿಕೆಟ್ ತಂಡ ಕಂಡ ಅತ್ಯಂತ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ದೋಣಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ಈ ಕುರಿತು ವಿಡಿಯೋವನ್ನು ಮಹೇಂದ್ರ ಧೋನಿ ಹಂಚಿಕೊಂಡಿದ್ದು, ನಿವೃತ್ತಿ ಸಮಯ ಬಂದಾಯಿತು ಎಂದಿದ್ದಾರೆ.


ಸ್ವಾತಂತ್ರ್ಯ ದಿನವಾದ ಇಂದು ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್​ ಜೀವನವನ್ನು ಕೊನೆಗೊಳಿಸಿದ್ದಾರೆ. ಭಾರತಕ್ಕೆ ಎರಡು ಬಾರಿ ವಿಶ್ವಕಪ್ ತಂದುಕೊಂಡ ಕೀರ್ತಿ ಧೋನಿಗೆ ಸಲ್ಲುತ್ತದೆ. ಧೋನಿ ಕೊನೆಯ ಬಾರಿ 2019 ವಿಶ್ವಕಪ್​ನಲ್ಲಿ ಸೆಮಿ ಫೈನಲ್​ನಲ್ಲಿ ನ್ಯೂಜಿಲೆಂಡ್ ವಿರುದ್ಧ ಕಣಕ್ಕಿಳಿದಿದ್ದರು. ಬಳಿಕ ಕ್ರಿಕೆಟ್​ನಿಂದ ದೀರ್ಘ ವಿರಾಮ ಪಡೆದುಕೊಂಡಿದ್ದರು. ಸದ್ಯ ಎಂಎಸ್​ಡಿ ದಿಢೀರ್ ವಿದಾಯ ಘೋಷಿಸಿದ್ದು ಅವರ ಕೋಟ್ಯಾಂತರ ಅಭಿಮಾನಿಗಳಿಗೆ ನೋವಾಗಿದೆ.


2004ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಎಂಎಸ್ ಧೋನಿ ಪದಾರ್ಪಣೆ ಮಾಡಿದ್ದರು. ಧೋನಿ ನೇತೃತ್ವದಲ್ಲಿ ಭಾರತ 2007ರ ಟಿ-20 ವಿಶ್ವಕಪ್ ಮತ್ತು 2011ರಲ್ಲಿ ಏಕದಿನ ವಿಶ್ವಕಪ್ ಕಪ್ ಗೆದ್ದು ಬೀಗಿತ್ತು. ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳಿರುವ ಎಂಎಸ್ ಧೋನಿ ಅವರು ಐಪಿಎಲ್ ನಲ್ಲಿ ಮಾತ್ರ ಆಡಲಿದ್ದಾರೆ.

Facebook Comments

comments