LATEST NEWS
ಎಂಆರ್ ಪಿಎಲ್ ನಿಂದ ರಾಸಾಯನಿಕ ಮಿಶ್ರಿತ ನೀರು ಸೋರಿಕೆ….!!

ಮಂಗಳೂರು ಜುಲೈ 27: ಎಂಆರ್ ಪಿಎಲ್ ನಿಂದ ರಾಸಾಯನಿಕ ಮಿಶ್ರಿತ ನೀರು ಸೋರಿಕೆಯಾಗಿ ಕುತ್ತೆತ್ತೂರು ಆಸುಪಾಸಿನ ಪರಿಸರದಲ್ಲಿ ದುರ್ವಾಸನೆ ಹಬ್ಬಿ ಸ್ಥಳೀಯ ನಿವಾಸಿಗಳಿಗೆ ಉಸಿರಾಟ ಸಮಸ್ಯೆ, ವಾಂತಿ, ಕೆಮ್ಮು, ಕಣ್ಣುರಿ, ತಲೆನೋವಿನಂತಹ ಆರೋಗ್ಯ ಸಮಸ್ಯೆಯೂ ಕಾಣಿಸಿಕೊಂಡ ಘಟನೆ ನಡೆದಿದೆ.
ಮಂಗಳವಾರ ಸಂಜೆ 6ರ ಬಳಿಕ ಪರಿಸರದಲ್ಲಿ ದುರ್ವಾಸನೆ ಬರಲು ಶುರುವಾಗಿದೆ ಎಂದು ಸ್ಥಳೀಯರು ತಿಳಿಸಿದ್ದು, ಸುಮಾರು ಒಂದೂವರೆ ಗಂಟೆ ತೀವ್ರ ಘಾಟು ಹಬ್ಬಿ ಉಸಿರಾಡಲೂ ಕಷ್ಟವಾಯಿತು. ಕೆಲವರಿಗೆ ಕಣ್ಮಿ ಊರಿ ಸೇರಿದಂತೆ ಆರೋಗ್ಯ ಸಮಸ್ಯೆಗಳು ಕಂಡು ಬಂದವು, ಸ್ಥಳಕ್ಕೆ ಆರೋಗ್ಯಾಧಿಕಾರಿಗಳು ಕುತ್ತೆತ್ತೂರಿಗೆ ಬುಧವಾರ ಭೇಟಿ ನೀಡಿ ಸ್ಥಳೀಯ ನಿವಾಸಿಗಳ ಆರೋಗ್ಯ ಪರಿಶೀಲನೆ ನಡೆಸಿದರು. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ರಾಸಾಯನಿಕಯುಕ್ತ ತ್ಯಾಜ್ಯನೀರು ಸೇರಿರುವ ಪ್ರದೇಶಗಳಲ್ಲಿ ನೀರಿನ ಮಾದರಿಗಳನ್ನು ಸಂಗ್ರಹಿಸಿದರು.

ಈ ಬಗ್ಗೆ ಎಂಆರ್ ಪಿಎಲ್ ಅಧಿಕಾರಿಗ ತ್ಯಾಜ್ಯ ಸಂಸ್ಕರಣೆ ಘಟಕದ ಪಂಪ್ ಹಾಳಾಗಿದ್ದರಿಂದ ನೀರು ಸೋರಿಕೆಯಾಗಿದ್ದು, ನೀರಿನಲ್ಲಿ ಯಾವುದೇ ರಾಸಾಯನಿಕ ಇರುವುದಿಲ್ಲ, ಪೆಟ್ರೋಲಿಯಂ ಉತ್ಪನ್ನಗಳ ಜಿಡ್ಡು ಇರುತ್ತದೆ ಎಂದು ತಿಳಿಸಿದ್ದಾರೆ ಎಂದು ಪ್ರಜಾವಾಣಿ ವರದಿ ಮಾಡಿದೆ.