LATEST NEWS
ಮೊದಲ ತ್ರೈಮಾಸಿಕ ಫಲಿತಾಂಶ – ಎಂಆರ್ ಪಿಎಲ್ ಗೆ 272 ಕೋಟಿ ನಷ್ಟ

ಮಂಗಳೂರು ಜುಲೈ 21: ದೇಶದ ಪ್ರಮುಖ ತೈಲ ಸಂಸ್ಕರಣಾ ಕಂಪೆನಿ ಎಂಆರ್ ಪಿಎಲ್ ತನ್ನ 2026ರ ಮೊದಲ ತ್ರೈಮಾಸಿಕ ವರದಿಯನ್ನು ಬಿಡುಗಡೆ ಮಾಡಿದ್ದು ಅದರಲ್ಲಿ 272 ಕೋಟಿ ನಷ್ಟ ತೋರಿಸಿದೆ.
ಜುಲೈ 18 ರಂದು ನಡೆದ 270 ನೇ ಸಭೆಯಲ್ಲಿ ಕಂಪನಿಯ ಮಂಡಳಿಯು ಮೊದಲ ತ್ರೈಮಾಸಿಕದ ಫಲಿತಾಂಶಗಳನ್ನು ಅನುಮೋದನೆ ನೀಡಿದೆ.
ಆದಾಯದಲ್ಲಿ ಕುಸಿತಕ್ಕೆ ತೈಲ ಸಂಸ್ಕರಣೆಯಲ್ಲಿ ಲಾಭಾಂಶ ಕಡಿಮೆಯಾಗಿರುವುದು ಪ್ರಮುಖ ಕಾರಣ ಎಂದು ಕಂಪೆನಿ ತಿಳಿಸಿದೆ. ಜೂನ್ ತ್ರೈಮಾಸಿಕದಲ್ಲಿ ಕಂಪೆನಿಗೆ 20,988 ಕೋಟಿ ರೂಪಾಯಿ ಆದಾಯ ಬಂದಿದೆ. 2025 ರ ಮೊದಲ ತ್ರೈಮಾಸಿಕದಲ್ಲಿ ಎಂಆರ್ ಪಿಎಲ್ ರೂ. 27,289 ಕೋಟಿಗಳಷ್ಟಿತ್ತು. ಒಟ್ಟು ಸಂಸ್ಕರಣಾ ಲಾಭಾಂಶ (GRM) ಪ್ರತಿ ಬ್ಯಾರೆಲ್‌ಗೆ $4.70 ರಿಂದ $3.88 ಕ್ಕೆ ಇಳಿದಿದೆ.

ಲಾಭಾಂಶ ಇಳಿಕೆಯ ನಡುವೆಯೂ MRPL ಏಪ್ರಿಲ್ 2025 ರಲ್ಲಿ ಒಂದು ಮೈಲಿಗಲ್ಲು ಸಾಧಿಸಿದೆ ಎಂದು ಹೇಳಿದೆ. 1,512 TMT ಕಚ್ಚಾ ತೈಲವನ್ನು ಸಂಸ್ಕರಿಸಿದೆ – ಇದು ಈ ತಿಂಗಳಿನಲ್ಲಿ ಇದುವರೆಗಿನ ಅತ್ಯಧಿಕ – ಇದು 2022 ರಲ್ಲಿ ಏಪ್ರಿಲ್‌ನಲ್ಲಿ ಸ್ಥಾಪಿಸಲಾದ 1,481 TMT ದಾಖಲೆಯನ್ನು ಮೀರಿಸಿದೆ. ಎಂಆರ್ ಪಿಎಲ್ ಮೊದಲ ತ್ರೈಮಾಸಿಕದ ನಷ್ಟದ ಬೆನ್ನಲ್ಲೆ ಶೇರು ಮಾರುಕಟ್ಟೆಯಲ್ಲಿ ಎಂಆರ್ ಪಿಎಲ್ ಶೇರು ಬೆಲೆ ಶೇಕಡ 7 ರಷ್ಚು ಇಳಿಕೆ ಕಂಡಿದೆ.