Connect with us

    LATEST NEWS

    AS9001:D ಪ್ರಮಾಣ ಪತ್ರ ಪಡೆದ ದೇಶದ ಮೊದಲ ರಿಫೈನರ್ ಎಂಆರ್ ಪಿಎಲ್

    ಮಂಗಳೂರು ಫೆಬ್ರವರಿ 02: ಮಂಗಳೂರಿನ MRPL ಸಂಸ್ಥೆ, ಅಂತರರಾಷ್ಟ್ರೀಯ ಏರೋಸ್ಪೇಸ್ ಕ್ವಾಲಿಟಿ ಗ್ರೂಪ್ (IAQG) ರವರ AS9001:D ಪ್ರಮಾಣಪತ್ರವನ್ನು ಪಡೆದಿದೆ. ಈ ಮೂಲಕ ಈ ಪ್ರಮಾಣ ಪತ್ರ ಪಡೆದ ದೇಶದ ಮೊದಲ ರಿಫೈನರ್ ಆಗಿ ಹೊರಹೊಮ್ಮಿದೆ. ಈ ಪ್ರಮಾಣಿಕರಣ ಮಾನದಂಡವು ವಾಯುಯಾನ, ಬಾಹ್ಯಾಕಾಶ ಮತ್ತು ರಕ್ಷಣಾ ಸಂಸ್ಥೆಗಳಲ್ಲಿ ಉತ್ಪಾದನೆ, ಸಂಗ್ರಹಣೆ, ಪರೀಕ್ಷೆ ಮತ್ತು ಏವಿಯೇಷನ್ ​​ಟರ್ಬೈನ್ ಇಂಧನ (ATF) ವಿತರಣೆಯನ್ನು ಖಾತರಿಪಡಿಸುತ್ತದೆ.


    MRPL ಈ ನೂತನ ಏರೋಸ್ಪೇಸ್ ಗುಣಮಟ್ಟವನ್ನು ಪಡೆದ ಭಾರತದ ಮೊದಲ ತೈಲ ಸಂಸ್ಕರಣಾಗಾರವಾಗಿದೆ. ಏರೋಸ್ಪೇಸ್ ಉದ್ಯಮವು ಅದರ ಪೂರೈಕೆ ಸರಪಳಿಯಲ್ಲಿ ಅತ್ಯಂತ ನಿಖರತೆ, ವಿಶ್ವಾಸಾರ್ಹತೆ ಮತ್ತು ಸುರಕ್ಷತೆಯನ್ನು ಬಯಸುತ್ತದೆ. AS9001:D ಮಾನದಂಡವು ಕಚ್ಚಾ ವಸ್ತುಗಳ ಪೂರೈಕೆಯಿಂದ ಅಂತಿಮ ಉತ್ಪನ್ನ ಪ್ರಮಾಣೀಕರಣದವರೆಗೆ ವಿವಿಧ ಪ್ರಕ್ರಿಯೆಗಳನ್ನು ಮತ್ತು ಸಂರಚನೆಯನ್ನು ಖಾತ್ರಿಗೊಳಿಸುತ್ತದೆ. ಪ್ರಮಾಣೀಕರಣ ಪ್ರಕ್ರಿಯೆಯು ಎಟಿಎಫ್‌ (ATF)ನ ಕ್ವಾಲಿಫೈಡ್ ಅಡಿಟಿವ್, ಕ್ಯಾಟಲಿಸ್ಟ ಮತ್ತು ಉತ್ಪಾದನಾ ಪ್ರಕ್ರಿಯೆಗಳ ಪ್ರಮಾಣೀಕರಣ, ಪೈಪ್‌ಲೈನ್ ನೆಟ್‌ವರ್ಕ್, ಫಾರಿನ್ ಆಬ್ಜೆಕ್ಟ್ ಡಿಟೇಕ್ಷನ್ (FOD) ತಡೆಗಟ್ಟುವಿಕೆ, ಶೇಖರಣಾ ಟ್ಯಾಂಕ್‌ಗಳ ಪ್ರಮಾಣೀಕರಣ ಮತ್ತು ವಿತರಣೆ ಈ ಎಲ್ಲಾ ಹಂತಗಳನ್ನು ಒಳಗೊಂಡಿರುತ್ತದೆ. MRPL ಏರೋಸ್ಪೇಸ್ ವಲಯದಲ್ಲಿ ತನ್ನ ಮಾರುಕಟ್ಟೆಯನ್ನು ವಿಸ್ತರಿಸಲು ಈ AS9001:D ಪ್ರಮಾಣಿಕರಣವೂ ಸಹಕಾರಿಯಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *