BELTHANGADI
ಶಾಸಕ ಹರೀಶ್ ಪೂಂಜಾ ಅರೆಸ್ಟ್ ಮಾಡಿದರೆ ದ.ಕ. ಜಿಲ್ಲೆ ಬಂದ್ ಮಾಡಲಾಗುವುದು – ನಳಿನ್ ಕುಮಾರ್ ಕಟೀಲ್
ಬೆಳ್ತಂಗಡಿ ಮೇ 22 : ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರನ್ನು ಅರೆಸ್ಟ್ ಮಾಡಿದರೆ ನಾಳೆ ದಕ್ಷಿಣಕನ್ನಡ ಜಿಲ್ಲೆಯನ್ನು ಬಂದ್ ಮಾಡಲಾಗುತ್ತದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಎಚ್ಚರಿಕೆ ನೀಡಿದ್ದಾರೆ. ಹರೀಶ್ ಪೂಂಜ ಅವರ ಮನೆಯಲ್ಲಿ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್
ಮಂಗಳೂರು ಶಾಸಕರ ಮೇಲೆ ಕೇಸು ದಾಖಲಿಸುವ ಹೀನ ಕೃತ್ಯ ಪೊಲೀಸರು ಮಾಡಿದ್ದಾರೆ. ಅನ್ಯಾಯದ ವಿರುದ್ಧ ಹೋರಾಟದಲ್ಲಿ ಶಾಸಕರು ಭಾಗಿ ಆಗೋದು ಸಾಮಾನ್ಯ, ನಿರಪರಾಧಿ ಬಂಧನ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಕೇಸು ಹಾಕುವ ಮೂಲಕ ದ್ವೇಷದ ರಾಜಕೀಯ ಮಾಡುತ್ತಿದೆ ಎಂದರು.
ಇಂತಹ ಪ್ರಕರಣ ಹತ್ತಾರು ಪ್ರಕರಣ ರಾಜ್ಯದಲ್ಲಿ ಆಗಿದೆ. ಹಿಂದೆ ನನ್ನ ಮೇಲೆ 3 ಪ್ರಕರಣ ಆಗಿತ್ತು, ನನಗೆ ಮನೆಗೆ ಬಂದು ನೋಟಿಸ್ ಜಾರಿ ಮಾಡಿಲ್ಲ. ಶಾಸಕರ ಜನಪ್ರಿಯತೆ ಸಹಿಸದೆ ಸಣ್ಣ ಕಾರಣ ಇಟ್ಟು ಬಂಧಿಸುವ ಕಾರ್ಯಕ್ಕೆ ಕೈ ಹಾಕಿದೆ. ನೋಟಿಸ್ ಕೊಟ್ಟು ಹೋಗಬೇಕಾದವರು ಬಂಧಿಸುದಕ್ಕೆ ಮುಂದಾಗಿದ್ದಾರೆ. ಶಾಸಕರ ಲೆ ಬಂಧನ ಮಾಡುವ ಕೇಸ್ ಇಲ್ಲ. ನೋಟಿಸ್ ಕೊಟ್ಟು ಉತ್ತರಕ್ಕೆ ಅವಕಾಶ ನೀಡಬೇಕು .ಏಕಾಏಕಿ ಬಂಧಿಸಲೇ ಬೇಕಾಂತ ಮಾಡಿದ ಹಾಗೆ ಇದೆ. ನಿಯಮ ಮೀರಿ ಸಂವಿಧಾನ ಮೀರಿ ಪೊಲೀಸರು ವರ್ತನೆ ಮಾಡಿದ್ದಾರೆ. ಕಾನೂನಿಗೆ ಗೌರವ ಕೊಟ್ಟು ನೋಟಿಸ್ ತೆಗೆದುಕೊಂಡಿದ್ದಾರೆ. ಶಾಸಕರು ಐದು ದಿನಗಳ ಕಾಲಾವಾಕಾಶ ಕೇಳಿದ್ದಾರೆ. ಇದಕ್ಕೂ ಮೀರಿ ಒತ್ತಡ ಹಾಕಿದ್ರೆ ಇಡೀ ಜಿಲ್ಲೆಯಲ್ಲಿ ಪ್ರತಿಭಟನೆ ಮಾಡುತ್ತೇವೆ, ಯಾವುದೇ ರಾಜಕೀಯ ಒತ್ರಡಕ್ಕೆ ಪೊಲೀಸರು ಮಣಿಯಬಾರದು, ಒಂದು ವೇಳೆ ಶಾಸಕರನ್ನು ಬಂಧನ ಮಾಡಿದ್ರೆ ದ.ಕ ಜಿಲ್ಲೆ ಬಂದ್‌ಗೆ ಕರೆ ನೀಡುತ್ತೇವೆ ಎಂದು ಸಂಸದ ನಳೀನ್ ಕುಮಾರ್ ಕಟೀಲು ಹೇಳಿಕೆ ಎಚ್ಚರಿಕೆ ನೀಡಿದರು.