LATEST NEWS
ರೈಲ್ವೆ ಹಳಿ ಲಾಕ್ ತೆಗೆದವರು ಸಣ್ಣ ಮಕ್ಕಳು ಅಂತ ಬಿಡಬಾರದು ಅವರ ಹಿಂದೆ ಯಾರಿದ್ದಾರೆ ಸಮಗ್ರ ತನಿಖೆಯಾಗಬೇಕು – ಸಂಸದ ಕೋಟ

ಪಡುಬಿದ್ರಿ ಫೆಬ್ರವರಿ 20: ರೈಲ್ವೆ ಹಳಿಯ ಲಿಂಕಿಂಗ್ ನ ಕಬ್ಬಿಣಗಳನ್ನು ತೆಗೆದ ಮಕ್ಕಳ ಮೇಲೆ ರೈಲ್ವೆ ಗ್ಯಾಂಗ್ ಮ್ಯಾನ್ ಹಲ್ಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ನಡೆದ ಅವರಾಲು ಮಟ್ಟು ಪ್ರದೇಶಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಮಾತನಾಡಿದ ಅವರು ರೈಲು ಹಳಿಗಳ ಕಬ್ಬಿಣದ ಲಾಕ್‌ಗಳನ್ನು ಬಾಲಕರು ತೆಗೆದ ಪ್ರಕರಣದಲ್ಲಿ ಗ್ಯಾಂಗ್‌ಮ್ಯಾನ್ ಗಮನಿಸದೆ ಇದ್ದಲ್ಲಿ ರಾಷ್ಟ್ರೀಯ ದುರಂತ ಸಂಭವಿಸಬಹುದಾದ ಪ್ರಕರಣವಿದು. ಹಾಗಾಗಿ ಈ ಕುರಿತು ಸರ್ಕಾರದಿಂದ ಸಮಗ್ರ ತನಿಖೆ ನಡೆಯಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಒತ್ತಾಯಿಸಿದರು.

ರೈಲ್ವೇ ಸುರಕ್ಷೆಯ ಬಗ್ಗೆ ಜನರ ಆತಂಕಕ್ಕೆ ಹೊಣೆ ಯಾರಾಗುತ್ತಾರೆ ಮತ್ತು ಈ ಘಟನೆಯ ಹಿಂದೆ ಯಾರ ಕೈವಾಡವಿದೆ ಎನ್ನುವುದರ ಕುರಿತಾಗಿ ಉನ್ನತ ಪೊಲೀಸ್ ಅಧಿಕಾರಿಗಳಿಂದ ಸಮಗ್ರ ತನಿಖೆಯಾಗಬೇಕು. ರೈಲ್ವೇ ಗ್ಯಾಂಗ್‌ಮ್ಯಾನ್, ಬಾಲಕರನ್ನು ಕಂಡು ಅವರ ಪ್ರಾಯವೆಷ್ಟೇ ಇದ್ದರೂ ಹಿಡಿದು ಪೊಲೀಸರಿಗೆ ಒಪ್ಪಿಸಲು ಆತ ಮಾಡಿದ ಕರ್ತವ್ಯದ ವಿರುದ್ಧ ಆತನ ಮೇಲೆಯೇ ದೂರು ದಾಖಲಾಗಿದೆ. ಬಾಲಕರಿಗೆ ₹100 ರೂ. ದಂಡ ವಿಧಿಸಿ ಬಿಟ್ಟಿದ್ದಾರೆ. ಈ ಕುರಿತು ಜನರಲ್ಲಿ ಆತಂಕ ಮನೆಮಾಡಿದೆ. ರೈಲ್ವೇ ಸುರಕ್ಷತೆಯ ಮೂಲಭೂತ ಪ್ರಶ್ನೆಯೂ ಅಡಗಿದೆ ಎಂದು ಹೇಳಿದರು.
ಆತಂಕ ಮನೆಮಾಡಿದೆ. ರೈಲ್ವೇ ಸುರಕ್ಷತೆಯ ಮೂಲಭೂತ ಪ್ರಶ್ನೆಯೂ ಅಡಗಿದೆ ಎಂದು ಹೇಳಿದರು. ಗ್ಯಾಂಗ್‌ಮ್ಯಾನ್ ವಿರುದ್ಧವಾಗಿ ದಾಖಲಾದ ಪ್ರಕರಣವನ್ನು ಪರಿಶೀಲನೆಗೊಳಪಡಿಸಿ ಆತ ನಿರಪರಾಧಿಯಾಗಿದ್ದರೆ, ಆತನ ವಿರುದ್ಧದ ಪ್ರಕರಣಗಳನ್ನು ವಾಪಾಸು ಪಡೆಯಬೇಕು ಎಂದು ಆಗ್ರಹಿಸಿದರು.