DAKSHINA KANNADA
ರಾಮಮಂದಿರ ಉದ್ಘಾಟನೆಯ ಆಹ್ವಾನ ತಿರಸ್ಕರಿಸಿದ ಕಾಂಗ್ರೆಸ್ ನಿಲುವನ್ನು ಖಂಡಿಸಿದ ಸಂಸದ ಕಟೀಲ್..!
ಮಂಗಳೂರು : ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯ ಆಹ್ವಾನವನ್ನು ತಿರಸ್ಕರಿಸಿದ ಕಾಂಗ್ರೆಸ್ ನಿಲುವನ್ನು ಸಂಸದ ನಳಿನ್ ಕುಮಾರ್ ಕಟೀಲ್ ತೀವ್ರವಾಗಿ ಖಂಡಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ‘ x ‘ ನಲ್ಲಿ ಪ್ರತಿಕ್ರೀಯಿಸಿದ್ದು,”ಪ್ರಭು ಶ್ರೀರಾಮನ ಅಸ್ತಿತ್ವವನ್ನೇ ಪ್ರಶ್ನಿಸಿದರು. ಮಂದಿರದ ನಿರ್ಮಾಣಕ್ಕೆ ಅಡ್ಡಿಮಾಡಲು ಎಲ್ಲ ಕುತಂತ್ರಗಳನ್ನು ಮಾಡಿದರು. ಈಗ ಆಹ್ವಾನ ನೀಡಿದರೂ ರಾಮನ ಪ್ರಾಣಪ್ರತಿಷ್ಠಾಪನಾ ಪುಣ್ಯಕಾರ್ಯಕ್ಕೆ ಬರಲು ನಿರಾಕರಿಸಿದ್ದಾರೆ. ಓಲೈಕೆ ರಾಜಕಾರಣಕ್ಕಾಗಿ ಆತ್ಮವನ್ನೇ ಮಾರಿಕೊಂಡ ಕಾಂಗ್ರೆಸ್ಸಿಗರಿಂದ ಇನ್ನೇನು ನಿರೀಕ್ಷಿಸಬಹುದು!” ಎಂದು ಬರೆದು ಕಾಂಗ್ರೆಸ್ ನಿಲುವನ್ನು ಟೀಕಿಸಿದ್ದಾರೆ. ಜನವರಿ 22ರಂದು ಅಯೋಧ್ಯೆಯಲ್ಲಿ ನಡೆಯುವ ರಾಮ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಆಹ್ವಾನವನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಲೋಕಸಭೆಯಲ್ಲಿ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಗೌರವಯುತವಾಗಿ ತಿರಸ್ಕರಿಸಿದ್ದಾರೆ ಎಂದು ಕಾಂಗ್ರೆಸ್ ಪ್ರಕಟಣೆಯಲ್ಲಿ ತಿಳಿಸಿತ್ತು.
https://x.com/nalinkateel/status/1745069453967065309?s=20