LATEST NEWS
ಸ್ಪೀಕರ್ ಖಾದರ್ ರಾಜ್ಯ ಸರಕಾರದ ಎಜೆಂಟ್ ರೀತಿ ಕೆಲಸ ಮಾಡಿದ್ದಾರೆ – ಸಂಸದ ಕಾ. ಚೌಟ

ಮಂಗಳೂರು ಮಾರ್ಚ್ 29: ಸ್ಪೀಕರ್ ಖಾದರ್ ಶಾಸಕರನ್ನು ಅಮಾನತು ಮಾಡುವ ಮೂಲಕ ರಾಜ್ಯ ಸರಕಾರದ ಏಜೆಂಟ್ ರೀತಿಯಲ್ಲಿ ವರ್ತಿಸಿದ್ದಾರೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಆರೋಪಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿಯ 18 ಮಂದಿ ಶಾಸಕರನ್ನು ಆರು ತಿಂಗಳು ಅಮಾನತು ಮಾಡುವ ಮೂಲಕ ಸ್ಪೀಕರ್ ಯು.ಟಿ. ಖಾದರ್ ಅವರು ಸರಕಾರದ ಏಜೆಂಟ್ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಜನರಿಂದ ಆಯ್ಕೆಯಾದ ಶಾಸಕರನ್ನು ಆರು ತಿಂಗಳು ಅಮಾನತು ಮಾಡುವುದು ಸರ್ವಾಧಿಕಾರಿ ನಿರ್ಧಾರವಾಗಿದೆ. ಶಾಸಕರ ಹಾಗೂ ಆಯಾ ಕ್ಷೇತ್ರದ ಜನತೆಯ ಧ್ವನಿಯನ್ನು
ಶಾಸಕರ ಹಾಗೂ ಆಯಾ ಕ್ಷೇತ್ರದ ಜನತೆಯ ಧ್ವನಿಯನ್ನು ದಮನಿಸುವ ಪ್ರಯತ್ನ, ಸುಸಂಸ್ಕೃತ ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದ ಸ್ಪೀಕರ್ ಅವರು ಈ ರೀತಿಯ ಕೆಟ್ಟ ಸಂಪ್ರದಾಯ ಆರಂಭಿಸಿರುವುದು ನಾಚಿಕೆಗೇಡು ಎಂದು ಚೌಟ ಹೇಳಿದರು.

1 Comment