LATEST NEWS
ಮೊರಾಕ್ಕೊ ಭೀಕರ ಭೂಕಂಪಕ್ಕೆ 296ಕ್ಕೂ ಅಧಿಕ ಮಂದಿ ಬಲಿ
ರಬಾತ್ ಸೆಪ್ಟೆಂಬರ್ 09 : ಶುಕ್ರವಾರ ತಡರಾತ್ರಿ ಮೊರಾಕೊದಲ್ಲಿ 6.8 ತೀವ್ರತೆಯ ಭೂಕಂಪವಾಗಿದ್ದು, ಇದರಿಂದಾಗಿ ಸುಮಾರು 300ಕ್ಕೂ ಅಧಿಕ ಮಂದಿ ಜನರು ಸಾವನ್ನಪ್ಪಿದ್ದಾರೆ ಎಂದು ದೇಶದ ಆಂತರಿಕ ಸಚಿವಾಲಯ ತಿಳಿಸಿದೆ.ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಅಲ್ ಜಜೀರಾ ಪ್ರಕಾರ, ಭೂಕಂಪದ ಕೇಂದ್ರವು ಮರ್ರೆಕೇಶ್‌ನ ಪಶ್ಚಿಮಕ್ಕೆ 72 ಕಿಲೋಮೀಟರ್ ದೂರದಲ್ಲಿದೆ, ಇದು ಪ್ರಮುಖ ಆರ್ಥಿಕ ಕೇಂದ್ರವಾಗಿದೆ. ಹಳೆಯ ನಗರವನ್ನು ಸುತ್ತುವರೆದಿರುವ ಮತ್ತು UNESCO ವಿಶ್ವ ಪರಂಪರೆಯ ತಾಣವಾಗಿರುವ ಕೆಂಪು ಗೋಡೆಗಳು ಸಹ ಹಾನಿಗೊಳಗಾಗಿವೆ. ಘಟನೆಯಲ್ಲಿ ನೂರಾರು ಜನರು ಗಾಯಗೊಂಡಿದ್ದಾರೆ. ಮನೆಗಳು, ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಹಲವಾರು ಜನರು ಸಿಲುಕಿಕೊಂಡಿದ್ದು ರಕ್ಷಣಾ ಕಾರ್ಯಗಳು ಭರದಿಂದ ನಡೆಯುತ್ತಿವೆ. ಸಾವು ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿಗೆ ಎಂದು ಮೊರಾಕ್ಕೊ ಪೊಲೀಸರು ಹೇಳಿದ್ದಾರೆ.
ಯುಎಸ್ ಜಿಯೋಲಾಜಿಕಲ್ ಸರ್ವೆ ಪ್ರಕಾರ, ಭೂಕಂಪವು ಆರಂಭದಲ್ಲಿ 6.8 ರ ತೀವ್ರತೆಯನ್ನು ಹೊಂದಿದ್ದು ಅದು ರಾತ್ರಿ 11:11 ಕ್ಕೆ ಅಪ್ಪಳಿಸಿತು ಮತ್ತು ಕಂಪನವು ಹಲವಾರು ಸೆಕೆಂಡುಗಳ ಕಾಲ ನಡೆಯಿತು. ಆದರೆ, ಮೊರಾಕೊದ ರಾಷ್ಟ್ರೀಯ ಭೂಕಂಪನ ಮಾನಿಟರಿಂಗ್ ಮತ್ತು ಅಲರ್ಟ್ ನೆಟ್‌ವರ್ಕ್ ಭೂಕಂಪವನ್ನು ರಿಕ್ಟರ್ ಮಾಪಕದಲ್ಲಿ 7 ಎಂದು ಅಳೆಯಿತು. ಮರ್ರಾಕೆಚ್‌ನ ನೈಋತ್ಯ ಭಾಗ ಭೂಕಂಪನಕ್ಕೆ ಗುರಿಯಾಗುವ ಪ್ರದೇಶವಾಗಿದೆ. 2004ರಲ್ಲಿ ಈಶಾನ್ಯ ಮೊರಾಕ್ಕೊದಲ್ಲಿ ಸಂಭವಿಸಿದ ಭೂಕಂಪದಲ್ಲಿ 628 ಮಂದಿ ಮೃತಪಟ್ಟಿದ್ದರು.