LATEST NEWS
ಬಸ್ ನಲ್ಲಿ ಒಟ್ಟಿಗೆ ಪ್ರಯಾಣಿಸುತ್ತಿದ್ದ ಕಾಲೇಜು ವಿಧ್ಯಾರ್ಥಿನಿ ವಿಧ್ಯಾರ್ಥಿಗೆ ತರಾಟೆ

ಮಂಗಳೂರು ಡಿಸೆಂಬರ್ 11: ಮಂಗಳೂರಿನಲ್ಲಿ ಮತ್ತೊಂದು ನೈತಿಕ ಪೊಲೀಸ್ ಗಿರಿ ಪ್ರಕರಣ ವರದಿಯಾಗಿದ್ದು, ಬಸ್ ನಲ್ಲಿ ಕುಳಿತಿದ್ದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯನ್ನು ತರಾಟೆಗೆ ತೆಗದುಕೊಂಡ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶಿವಮೊಗ್ಗದ ವಿದ್ಯಾರ್ಥಿ ಮತ್ತು ಉಡುಪಿಯ ವಿದ್ಯಾರ್ಥಿನಿ ನಗರ ಹೊರವಲಯದ ಮಂಗಳೂರಿನ ಖಾಸಗಿ ಕಾಲೇಜೊಂದರ ವಿದ್ಯಾಭ್ಯಾಸ ಮಾಡುತ್ತಿದ್ದು, ಮಂಗಳೂರಿನ ಸರ್ವಿಸ್ ಬಸ್ ನಿಲ್ದಾಣದಲ್ಲಿ ಉಡುಪಿಗೆ ತೆರಳುವ ಬಸ್‌ನಲ್ಲಿ ಕುಳಿತಿದ್ದರು. ಇದನ್ನು ಕಂಡ ಕೆಲವರು ಬಸ್‌ನೊಳಗೆ ನುಗ್ಗಿದ್ದು, ವಿದ್ಯಾರ್ಥಿನಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ವಿದ್ಯಾರ್ಥಿಯ ಗುರುತಿನ ಚೀಟಿ ಮತ್ತು ವಿಳಾಸವನ್ನು ಕೇಳಿ ಬೆದರಿಸಿದ್ದಾರೆ.

ಈ ಬಗ್ಗೆ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೊಲೀಸ್ ಕಮಿಷನರ್ ಶಶಿಕುಮಾರ್, ಪ್ರಕರಣದ ಬಗ್ಗೆ ಮತ್ತು ವಿದ್ಯಾರ್ಥಿಗಳು ಎಲ್ಲಿಯವರು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
Another case of #moral #policing reported in #coastal belt of #Karnataka. A #Muslim boy travelling with his #Hindu classmate were harassed and forced to get down from bus by #bajrangdal members.
No case registered. pic.twitter.com/QUkrDbOfzO— Imran Khan (@KeypadGuerilla) December 10, 2021