BELTHANGADI
ನೈತಿಕ ಪೊಲೀಸ್ ಗಿರಿ – ಆಟೋದಲ್ಲಿ ಹಿಂದೂ ಯುವತಿಯನ್ನ ಕೂರಿಸಿದ್ದಕ್ಕೆ ಚಾಲಕನ ಮೇಲೆ ಹಲ್ಲೆ…!!
ಬೆಳ್ತಂಗಡಿ ಅಗಸ್ಟ್ 03: ಕರಾವಳಿಯಲ್ಲಿ ನೈತಿಕ ಪೊಲೀಸ್ ಗಿರಿ ಮುಂದುವರೆದಿದೆ. ಸಿಎಂ ಎಚ್ಚರಿಕೆಯ ನಡುವೆಯೂ ನೈತಿಕ ಪೊಲೀಸ್ ಗಿರಿ ನಡೆಯುತ್ತಿದ್ದು, ಇದೀಗ ಆಟೋದಲ್ಲಿ ಹಿಂದೂ ಯುವತಿಯನ್ನು ಕೂರಿಸಿಕೊಂಡಿದ್ದಕ್ಕೆ ದುಷ್ಕರ್ಮಿಗಳ ತಂಡ ಮುಸ್ಲಿಂ ಆಟೋ ಚಾಲಕನ ಮೇಲೆ ಹಲ್ಲೆ ಮಾಡಿದ ಘಟನೆ ಧರ್ಮಸ್ಥಳ ದ್ವಾರದ ಬಳಿಯ ಬಸ್ ನಿಲ್ದಾಣದಲ್ಲಿ ನಡೆದಿದೆ.
ಉಜಿರೆ ನಿವಾಸಿ ಮೊಹಮ್ಮದ್ ಆಶಿಕ್ (22) ಹಲ್ಲೆಗೊಳಗಾದ ಚಾಲಕ, ಉಜಿರೆಯಲ್ಲಿ ಓದುತ್ತಿರುವ ವಿಧ್ಯಾರ್ಥಿನಿ ಬೆಂಗಳೂರಿಗೆ ತೆರಳು ಉಜಿರೆ ದ್ವಾರದ ಎದುರು ನಿಂತು ಪರಿಚಯಸ್ಥ ಮುಸ್ಲಿಂ ಆಟೋ ಚಾಲಕನಿಗೆ ಕರೆ ಮಾಡಿದ್ದು ಆತ ಬಂದು ಉಜಿರೆಯಿಂದ ಧರ್ಮಸ್ಥಳ ಬಸ್ ನಿಲ್ದಾಣಕ್ಕೆ ಆ.2 ರಂದು ರಾತ್ರಿ ಸುಮಾರು 9 ಗಂಟೆಗೆ ಡ್ರಾಪ್ ಮಾಡಿ ಹೊರಡುವಾಗ ಅಪರಿಚಿತ ಯುವಕರ ತಂಡ ನಿನಗೆ ಹಿಂದೂ ಯುವತಿಯರೆ ಬೇಕಾ ಎಂದು ಬೆದರಿಕೆ ಹಾಕಿ ಹಲ್ಲೆ ನಡೆಸಿದ್ದಾರೆ.ಯುವಕ ಸಧ್ಯ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.