DAKSHINA KANNADA
ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ: ಅನ್ಯಕೊಮಿನ ಜೋಡಿಯ ಬೆನ್ನಟಿದ ಬಜರಂಗದಳ ಕಾರ್ಯಕರ್ತರು!
ಮಂಗಳೂರು, ನವೆಂಬರ್ 28: ಹಿಂದು ಯುವತಿಯ ಜೊತೆಗೆ ಮುಸ್ಲಿಂ ಯುವಕನೊಬ್ಬ ಸುತ್ತಾಡುವುದನ್ನು ಗಮನಿಸಿದ ಬಜರಂಗದಳ ಕಾರ್ಯಕರ್ತರು ಬೈಕಿನಲ್ಲಿ ಬೆನ್ನಟ್ಟಿ ಹಲ್ಲೆಗೆ ಯತ್ನಿಸಿದ ಘಟನೆ ನಗರದ ಮೋರ್ಗನ್ಸ್ ಗೇಟ್ ಬಳಿಯ ಮಂಕಿ ಸ್ಟಾಂಡ್ ನಲ್ಲಿ ನಡೆದಿದೆ.
ಮಂಕಿ ಸ್ಟಾಂಡ್ ನಲ್ಲಿ ಮಳಿಗೆ ಒಂದರಲ್ಲಿ ಕೆಲಸಕ್ಕಿದ್ದ ಅನ್ಯಕೋಮಿನ ಯುವಕ ಹಾಗೂ ಚಿಕ್ಕಮಗಳೂರಿನ ಯುವತಿ ಜೊತೆಯಾಗಿ ಸುತ್ತಾಡುತ್ತಿದ್ದರು. ಸ್ಕೂಟರ್ ನಲ್ಲಿ ಜೋಡಿಯ ಸುತ್ತಾಟ ಗಮನಿಸಿ ಬಜರಂಗದಳ ಕಾರ್ಯಕರ್ತರು ಬೈಕ್ ನಲ್ಲಿ ಬೆನ್ನಟ್ಟಿದ್ದಾರೆ. ಬಳಿಕ ಸ್ಕೂಟರ್ ಗೆ ಅಡ್ಡ ಹಾಕಿ ಜೋಡಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸ್ಥಳದಲ್ಲಿ ಎರಡು ಕೋಮಿನ ಯುವಕರು ಜಮಾಯಿಸಿದ್ದು ತಂಡಗಳ ನಡುವೆ ಮಾತಿನ ಚಕಮಕಿಯಾಗಿದೆ. ಪರಿಸ್ಥಿತಿ ವಿಕೋಪಕ್ಕೆ ತೆರಳುತಿದ್ದಂತೆ ಮಧ್ಯ ಪ್ರವೇಶಿಸಿದ ಪಾಂಡೇಶ್ವರ ಠಾಣೆ ಪೊಲೀಸರು ಗುಂಪನ್ನು ಚದುರಿಸಿದ್ದಾರೆ. ಅನ್ಯಕೋಮಿನ ಜೋಡಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ನೈತಿಕ ಪೊಲೀಸ್ ಗಿರಿ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪಾಂಡೇಶ್ವರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಕ್ಷಯ್ ರಾವ್ ಮತ್ತು ಶಿಬಿನ್ ಪಡಿಕಲ್ ಬಂಧಿತರು ಆರೋಪಿಗಳು. ಬಂಧಿತರನ್ನು ಪಾಂಡೇಶ್ವರ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.