LATEST NEWS
ಮೂಡಬಿದಿರೆ – ಆತ್ಮಹತ್ಯೆಗೆ ಶರಣಾದ ಇಂಜಿನಿಯರಿಂಗ್ ವಿಧ್ಯಾರ್ಥಿ

ಮೂಡಬಿದಿರೆ ಜೂನ್ 19: ಇಂಜಿನಿಯರಿಂಗ್ ವಿಧ್ಯಾರ್ಥಿಯೊರ್ವ ಆತ್ಮಹತ್ಯೆಗೆ ಶರಣಾದ ಘಟನೆ ರವಿವಾರ ಅಲಂಗಾರ್‌ನಲ್ಲಿ ಸಂಭವಿಸಿದೆ.
ಮೂಡುಬಿದಿರೆ ಎಸ್.ಎನ್.ಎಂ ಪಾಲಿಟೆಕ್ನಿಕ್‌ನ ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಸುರೇಶ್ ಭಂಡಾರಿ ಅವರ ಪುತ್ರ, ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಥಮ ವರ್ಷದ ಇಂಜಿನಿಯರಿಂಗ್ ಮಾಡುತ್ತಿದ್ದ ವಿದ್ಯಾರ್ಥಿ ಸಾತ್ವಿಕ್ ಭಂಡಾರಿ(21) ಆತ್ಮಹತ್ಯೆ ಮಾಡಿಕೊಂಡಾತ. ಮಗನನ್ನು ಹೆತ್ತವರು ಎಬ್ಬಿಸಿ, ಪರೀಕ್ಷೆ ಹತ್ತಿರ ಬಂದಿದೆ, ಬೇಗ ಎದ್ದು ಓದು ಎಂದು ಬುದ್ದಿವಾದ ಹೇಳಿದರೆನ್ನುವ ಕೋಪಗೊಂಡ ಸಾತ್ವಿಕ್ ಕೋಣೆಯ ಬಾಗಿಲು ಮುಚ್ಚಿ ಶಾಲನ್ನು ಫ್ಯಾನಿಗೆ ಕಟ್ಟಿ ಆತ್ಮಹತ್ಯೆಗೈದಿದ್ದ. ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
