DAKSHINA KANNADA
ಮೂಡುಬಿದಿರೆ – ಇಸ್ಪೀಟ್ ಅಡ್ಡೆಗೆ ದಾಳಿ 8 ಮಂದಿ ಅರೆಸ್ಟ್

ಮೂಡುಬಿದಿರೆ ಜುಲೈ 13: ಇಸ್ಪೀಟ್ ಅಡ್ಡೆಗೆ ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ. ನೇತೃತ್ವದ ತಂಡ ನಡೆಸಿದ ದಾಳಿಯಲ್ಲಿ 8 ಮಂದಿಯನ್ನು ಅರೆಸ್ಟ್ ಆದ ಘಟನೆ : ಇರುವೈಲು ಗ್ರಾಮದ ಕೋರಿಬೆಟ್ಟು ಎಂಬಲ್ಲಿ ನಡೆದಿದೆ.
ಬಂಧಿತರನ್ನು ಅಕ್ಬರ್, ಸಂತೋಷ್, ಪ್ರಶಾಂತ್, ಮಹಾಬಲ ಪೂಜಾರಿ, ಪ್ರಜ್ವಲ್, ಗಿರೀಶ್, ರಾಜೇಶ್ ಬಂಧಿತರು. ಗಣೇಶ್, ಶ್ರೀನಾಥ್, ದಿನೇಶ್ ಕೆಂಪುಗುಡ್ಡೆ, ಕೇಶವ ಯಾನೆ ಅಪ್ಪು ಹಾಗೂ ಇನ್ನಿತರರು ಓಡಿ ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳಿಂದ ಹತ್ತು ಸಾವಿರ ನಗದು, ಎರಡು ದ್ವಿಚಕ್ರ ವಾಹನಗಳು ಹಾಗು ಇತರ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೊಲೀಸ್ ಸಿಬ್ಬಂದಿಗಳಾದ ರಾಜೇಶ್, ನಾಗರಾಜ್, ಸುರೇಶ್,ವೆಂಕಟೇಶ್, ಚಂದ್ರಶೇಖರ ಹಾಗೂ ಚಾಲಕ ಉಮೇಶ್ ಕಾರ್ಯಾಚರಣೆಯಲ್ಲಿದ್ದರು., ಜೂಜಿಗೆ ಬಳಸಿದ್ದ ನಗದು, ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
