LATEST NEWS
ಕೇರಳಕ್ಕೆ ಮೂರು ದಿನ ಮೊದಲೇ ಮುಂಗಾರು ಮಳೆ ಪ್ರವೇಶ

ಕೇರಳ ಮೇ 29: ಜೂನ್ 1 ಕ್ಕೆ ವಾಡಿಕೆಯಂತೆ ಮುಂಗಾರು ಮಳೆ ಕೇರಳ ಪ್ರವೇಶಿಸಬೇಕಿದ್ದ ಮುಂಗಾರು ಮಳೆ ಈ ಬಾರಿ ಮೂರು ದಿನ ಮುನ್ನವೇ ಕೇರಳಕ್ಕೆ ಪ್ರವೇಶಿಸಿದೆ ಎಂದು ಹವಮಾನ ಇಲಾಖೆ ಮಾಹಿತಿ ನೀಡಿದೆ.
ಈ ಹಿನ್ನಲೆ ದೇಶಕ್ಕೆ ಅಧಿಕೃತವಾಗಿ ಮುಂಗಾರು ಪ್ರವೇಶವಾಗಿದೆ. ಈ ಹಿಂದೆ ನೈರುತ್ಯ ಮುಂಗಾರು ಇದೇ 27ರಂದು ಕೇರಳ ಪ್ರವೇಶಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಈ ಹಿಂದೆ ಹೇಳಿತ್ತು. ಕೇರಳದಲ್ಲಿ ಸಾಮಾನ್ಯವಾಗಿ ಜೂನ್ 1ಕ್ಕೆ ಮುಂಗಾರು ಆರಂಭವಾಗುವುದು ವಾಡಿಕೆ. ಮುಂದಿನ ಎರಡು ದಿನಗಳಲ್ಲಿ ಕೇರಳ, ಲಕ್ಷದೀಪದಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಹೇಳಿದೆ.

ಅಸಾನಿ ಚಂಡಮಾರುತದ ಹಿನ್ನಲೆ ಮುಂಗಾರು ಮಳೆ ಪ್ರವೇಶದ ಮೇಲೆ ಪರಿಣಾಮ ಬೀರಬಹುದು ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಆದರೆ ಇದೀಗ ಮೂರು ದಿನಗಳ ಮೊದಲೆ ಮುಂಗಾರು ಪ್ರವೇಶಿಸಿದೆ.