KARNATAKA
ಮಂಗಗಳ ಬೇಟೆ ಮೂವರ ಬಂಧನ

ವಿರಾಜಪೇಟೆ ಜುಲೈ 6: ವಿರಾಜಪೇಟೆ ವಿಭಾಗದ, ವಿರಾಜಪೇಟೆ ವಲಯದ ತೋರ, ಕೆದ ಮುಳ್ಳೂರು ಗ್ರಾಮದಲ್ಲಿ, ಮಂಗನನ್ನು ಬೇಟೆಯಾಡಿದ ಮೂವರನ್ನು ಕೋವಿ ಹಾಗೂ ಮಾಂಸ ಸಮೇತ ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಜೀವನ್ ಕರುಂಬಯ್ಯ ಹಾಗೂ ಉಮೇಶ್ ಬಂಧಿತ ಎಂದು ಗುರುತಿಸಲಾಗಿದ್ದು, ಓರ್ವ ಆರೋಪಿ ತಲೆಮರೆಸಿಕೊಂಡಿದ್ದಾರೆ.
ಖಚಿತ ಸುಳಿವಿನ ಮೇರೆಗೆ ಅಧಿಕಾರಿಗಳು, ಉಮೇಶ್ ರವರ ಲೈನ್ ಮನೆಯನ್ನು ಶೋಧಿಸಿದಾಗ ಅಂದಾಜು ಮೂರು ಕೆಜಿಗೂ ಅಧಿಕ ಮಂಗಗಳ ಮಾಂಸ ಲಭಿಸಿದ್ದು ಕೃತ್ಯಕ್ಕೆ ಬಳಸಿದ್ದ ಕೋವಿ ಹಾಗೂ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ.
ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ರೋಹಿಣಿ ದಿಲೀಪ್ ಕುಮಾರ್, ಡಿ ಆರ್ ಎಫ್ . ಒ ಸಂಜಿತ್ ಸೋಮಯ್ಯ, ಅರಣ್ಯ ರಕ್ಷಕರಾದ ಪ್ರಶಾಂತ್ ಕುಮಾರ್ ನಾಗರಾಜ್ ಹಾಗೂ ಸಿಬ್ಬಂದಿಗಳಾದ ಮಧು, ವಿಕಾಸ್ ಲತೇಶ್, ಪ್ರಕಾಶ್ ಪೊನ್ನಪ್ಪ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
