LATEST NEWS
ರಸ್ತೆಯಲ್ಲಿ ಸಿಕ್ಕ 10 ಸಾವಿರ ರೂಪಾಯಿ ಹಣವನ್ನು ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ವಿದ್ಯಾರ್ಥಿನಿಯರು
ಉಡುಪಿ ಜನವರಿ 06: ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಕೋಣಿ ಪ್ರೌಢ ಶಾಲಾ ನಾಲ್ಕು ವಿದ್ಯಾರ್ಥಿನಿಯರು ಪ್ರಾಮಾಣಿಕತೆ ಮೆರೆದಿದ್ದಾರೆ. ಶಾಲೆ ಬಿಟ್ಟು ಮನೆಗೆ ತೆರಳುತ್ತಿದ್ದ ಸಂದರ್ಭ ಸಾರ್ವಜನಿಕ ರಸ್ತೆಯಲ್ಲಿ ಸಿಕ್ಕಿದ ಹತ್ತು ಸಾವಿರ ರುಪಾಯಿ ಮೊತ್ತವನ್ನು ಶಾಲಾ ಮುಖ್ಯೋಪಾಧ್ಯಾಯರಿಗೆ ನೀಡಿದ್ದು, ಬಳಿಕ ಅದನ್ನು ಅದರ ವಾರಿಸುದಾರರಿಗೆ ಮರಳಿಸಲಾಗಿದೆ.
ದ್ದಾರೆ. ಮುಖ್ಯೋಪಾಧ್ಯಯರು ವಾಟ್ಸಪ್ ಮೂಲಕ ಸಾರ್ವಜನಿಕ ಸಂದೇಶವನ್ನು ಹರಿಬಿಟ್ಟಿದ್ದಾರೆ. Rs.10 ಸಾವಿರ ಅದೇ ಊರಿನ ಅಂಚೆ ಇಲಾಖೆಯಲ್ಲಿ ಕೆಲಸ ಮಾಡುವ ಸುರೇಖಾ ಅವರದ್ದಾಗಿತ್ತು. ಮುಖ್ಯೋಪಾಧ್ಯಾಯರಿಗೆ ಸೂಕ್ತ ದಾಖಲೆಗಳನ್ನು ನೀಡಿದ ಹಿನ್ನೆಲೆಯಲ್ಲಿ, ಇಂದು ಬೆಳಗ್ಗೆ ಶಾಲೆಯ ಅಸಂಬ್ಲಿ ನಡೆಯುತ್ತಿರುವ ಸಂದರ್ಭ ಪ್ರಾಮಾಣಿಕ ಮಕ್ಕಳಾದ ಕುಮಾರಿ ಶ್ರಾವ್ಯಾ, ಐಶ್ವರ್ಯಾ ಜೆ, ಪ್ರಸ್ತುತಿ ಮತ್ತು ವೈಷ್ಣವಿ ಇವರು ಹಣವನ್ನು ಕಳೆದುಕೊಂಡ ಕುಮಾರಿ ಸುಲೇಖಾ ಅವರಿಗೆ ಹಸ್ತಾಂತರಿಸಿದರು. ಸುಲೇಖ ಶಾಲೆಯ ಎಲ್ಲಾ ವಿದ್ಯಾರ್ಥಿಗಳಗೆ ಸಿಹಿ ವಿತರಿಸಿ ಧನ್ಯವಾದ ಸಮರ್ಪಿಸಿದರು. ಮಕ್ಕಳ ಪ್ರಾಮಾಣಿಕತನ ಎಲ್ಲರಿಗೂ ಮಾದರಿ. ಈ ಘಟನೆ ನಮ್ಮ ಶಾಲೆಗೆ ಹೆಗ್ಗಳಿಕೆಗೆ ಕಾರಣವಾಗಿದೆ. ಸರಕಾರಿ ಶಾಲೆಯ ಮಕ್ಕಳಲ್ಲಿರುವ ನಿಯತ್ತನ್ನು ಮುಖ್ಯೋಪಾಧ್ಯಾಯರು , ಶಿಕ್ಷಕರು ಕೊಂಡಾಡಿದ್ದಾರೆ.